Publish Date: Tue, 22 Sep 2020 (21:32 IST)
Updated Date: Tue, 22 Sep 2020 (21:34 IST)
ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ಇದೀಗ ಬಾಲಿವುಡ್ ಘಟಾನುಘಟಿ ನಟ, ನಟಿಯರನ್ನು ಬೆಚ್ಚಿ ಬೀಳಿಸುತ್ತಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಬಂಧನ ಮಾಡಿದ ಮೇಲೆ ದಿನೇ ದಿನೆ ಕೇಸ್ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.
ಡ್ರಗ್ಸ್ ಪ್ರಕರಣದ ತನಿಖೆಗಾಗಿ ದೇಶದ ವಿವಿಧ ಭಾಗಗಳ ಉನ್ನತ ಅಧಿಕಾರಿಗಳನ್ನು ಎನ್ ಸಿ ಬಿ ಕರೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಸಿಮೋನೆ ಖಂಬಟ್ಟಾ ಸೇರಿದಂತೆ ಬಾಲಿವುಡ್ ಬಿಗ್ ವಿಗ್ ಗಳನ್ನು ಕೇಂದ್ರ ಸಂಸ್ಥೆ ವಿಚಾರಣೆಗಾಗಿ ಕರೆಸಿಕೊಳ್ಳಬಹುದು.
ತನಿಖೆಯಲ್ಲಿ ನಟಿಯರ ಹೆಸರು ಬಂದ ನಂತರ ದೀಪಿಕಾ ಪಡುಕೋಣೆ ಕೂಡ ತಮ್ಮ ಹೇಳಿಕೆ ನೀಡುವುದಕ್ಕೆ ಎನ್ ಸಿ ಬಿ ಕಚೇರಿಗೆ ಬರಬಹುದು ಎನ್ನಲಾಗುತ್ತಿದೆ.