Select Your Language

Notifications

webdunia
webdunia
webdunia
webdunia

ಬಾಲಿವುಡ್ ನಲ್ಲಿ ಡ್ರಗ್ಸ್ ಸ್ಫೋಟ : ಹಿಟ್ ಲಿಸ್ಟ್ ನಲ್ಲಿರೋ ನಟ, ನಟಿಯರು ಯಾರು?

ಬಾಲಿವುಡ್ ನಲ್ಲಿ ಡ್ರಗ್ಸ್ ಸ್ಫೋಟ : ಹಿಟ್ ಲಿಸ್ಟ್ ನಲ್ಲಿರೋ ನಟ, ನಟಿಯರು ಯಾರು?
ಮುಂಬೈ , ಮಂಗಳವಾರ, 22 ಸೆಪ್ಟಂಬರ್ 2020 (22:29 IST)
ಬಾಲಿವುಡ್ ನಲ್ಲಿನ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ತನಿಖೆ ಚುರುಕುಗೊಳಿಸಿದೆ.

ಈ ನಡುವೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಬಹಿರಂಗವಾಗಿದೆ. ಅದರ ಬೆನ್ನಲ್ಲೇ ಕೆಲವು ನಟ, ನಟಿಯರ ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಹೊಂದಿರುವ ಕೆವಾನ್ ಬಗ್ಗೆ ಅನುಮಾನ ಶುರುವಾಗಿದೆ.

ಕೆವಾನ್ ಈಗಾಗಲೇ ಹಲವು ಪ್ರಖ್ಯಾತ ನಟರಿಗಾಗಿ ಕೆಲಸ ಮಾಡಿದೆ ಎನ್ನಲಾಗಿದ್ದು, ಇದೀಗ ಬಾಲಿವುಡ್‌ನ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ, ನಟ ಟೈಗರ್ ಶ್ರಾಫ್, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕೆಲಸವನ್ನು ಕೆವಾನ್ ನಿರ್ವಹಿಸುತ್ತಿದೆ.
ಈ ನಡುವೆ ಸಲ್ಮಾನ್ ಖಾನ್ ಹೆಸರು ಕೇಳಿಬಂದಿದ್ದು, ಅದಕ್ಕೆ ಸಲ್ಮಾನ್ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ.

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ವಕೀಲರು ತಮ್ಮ ಕ್ಲೈಂಟ್ ಯಾವುದೇ ರೀತಿಯಲ್ಲಿ ಏಜೆನ್ಸಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸುವ ಹೇಳಿಕೆ ನೀಡಿದ್ದಾರೆ.

"ನಮ್ಮ ಕ್ಲೈಂಟ್ ಸಲ್ಮಾನ್ ಖಾನ್, ಭಾರತದ ಪ್ರಮುಖ ನಟ, ಪ್ರತಿಭಾ ನಿರ್ವಹಣಾ ಸಂಸ್ಥೆ ಕೆವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ನಲ್ಲಿ ಹೆಚ್ಚಿನ ಪಾಲನ್ನು ಹೊಂದಿದ್ದಾರೆ ಎಂದು ಕೆಲವು ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ.

ಸಲ್ಮಾನ್ ಖಾನ್ ಅವರು ಕೆವಾನ್ ಅಥವಾ ಅದರ ಯಾವುದೇ ಗುಂಪು ಘಟಕಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾಲನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್ - ಹೊಸ ಬಾಂಬ್ ಸಿಡಿಸಿದ ಸಂಸದೆ ನವನೀತ್ ಕೌರ್ ರಾಣಾ