Daily Horoscope

Select Your Language

Notifications

webdunia
webdunia
webdunia
webdunia

ನಟಿ ದೀಪಿಕಾ ಪಡುಕೋಣೆಗೆ ಡ್ರಗ್ಸ್ ಕಂಟಕ

ಡ್ರಗ್ಸ್ ಕೇಸ್
ಡ್ರಗ್ಸ್ ಕೇಸ್ ನಲ್ಲಿ ಎನ್ ಸಿ ಬಿ ತನಿಖೆ ನಡೆಸುತ್ತಿದ್ದು, ಕೆಲವು ಬಾಲಿವುಡ್ ಘಟಾನುಘಟಿಗಳಿಗೆ ಹೈಟೆನ್ಶನ್ ಶುರುವಾಗಿದೆ.

ಡ್ರಗ್ಸ್ ಕುರಿತು ಚರ್ಚಿಸಿರುವ ಕೆಲವು ವಾಟ್ಸಾಪ್ ಸಂಭಾಷಣೆಗಳು ಎನ್ ಸಿ ಬಿ ಏಜೆನ್ಸಿ ಹತ್ತಿರ ಇವೆ ಎನ್ನಲಾಗಿದೆ. ಈ ಕೆಲವು ಚಾಟ್‌ಗಳು ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಮತ್ತು ಒಬ್ಬ 'ಡಿ' ನಡುವೆ ಇದ್ದವು ಎನ್ನಲಾಗಿದೆ.

'ಚಪ್ಪಾಕ್' ನಟಿ ನಡುವಿನ ಸಂಭಾಷಣೆಯಲ್ಲಿ, ಪಾರ್ಟಿ ಮಾಡುತ್ತಿದ್ದ ಐಷಾರಾಮಿ ಕ್ಲಬ್‌ಗೆ "ಹ್ಯಾಶ್" ತರಲು ತನ್ನ ಮ್ಯಾನೇಜರ್‌ಗೆ ಹೇಳಲಾಗಿದೆ. ಇವರಿಬ್ಬರ ನಡುವೆ ಈ ಸಂದೇಶಗಳ ವಿನಿಮಯವು ಅಕ್ಟೋಬರ್ 2017 ರಲ್ಲಿ ವಾಟ್ಸಾಪ್‌ನಲ್ಲಿ ನಡೆದಿದೆ.

ಈ ನಡುವೆ ನಟಿ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ತನ್ನ ಕಾನೂನು ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಮುಂಬರುವ ಚಿತ್ರದ ಚಿತ್ರೀಕರಣಕ್ಕಾಗಿ ಪ್ರಸ್ತುತ ಗೋವಾದಲ್ಲಿರುವ ದೀಪಿಕಾ ಪಡುಕೋಣೆ ಶೀಘ್ರ ಗೋವಾ ಬಿಡುವ ಸಾಧ್ಯತೆಯಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯದ ಬಗ್ಗೆ ಲೇಟೆಸ್ಟ್ ಸುದ್ದಿ ಕೊಟ್ಟ ಪುತ್ರ ಚರಣ್