Publish Date: Wed, 23 Sep 2020 (11:21 IST)
Updated Date: Wed, 23 Sep 2020 (11:22 IST)
ಚೆನ್ನೈ: ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಬಗ್ಗೆ ಅವರ ಪುತ್ರ ಎಸ್ ಪಿ ಚರಣೆ ಲೇಟೆಸ್ಟ್ ಮಾಹಿತಿ ನೀಡಿದ್ದಾರೆ.
ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಎಸ್ ಪಿಬಿ ಕೊನೆಗೂ ಚೇತರಿಸಿಕೊಂಡಿದ್ದಾರೆ. ಅಸಂಖ್ಯಾತ ಅಭಿಮಾನಿಗಳು ಅವರು ಗುಣಮುಖರಾಗಲು ಬೇಡಿಕೊಂಡಿದ್ದರು. ಇದೀಗ ಚೇತರಿಸಿಕೊಂಡಿರುವ ಎಸ್ ಪಿಬಿ ಮನೆಗೆ ಹೋಗಲು ಹಾತೊರೆಯುತ್ತಿದ್ದಾರಂತೆ. ಈಗಲೂ ವೆಂಟಿಲೇಟರ್ ಅಳವಡಿಸಲಾಗಿದೆ. ಜತೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಸದ್ಯಕ್ಕೆ ಅವರಿಗೆ ದ್ರವಾಹಾರ ನೀಡಲಾಗುತ್ತಿದೆ. ಅವರಿಗೆ ಈಗ ಆಸ್ಪತ್ರೆಯಿಂದ ಬಿಡುಗಡೆಯಾದರೆ ಸಾಕು ಎನಿಸಿದೆ ಎಂದು ಚರಣ್ ಹೇಳಿದ್ದಾರೆ.