Publish Date: Wed, 23 Sep 2020 (10:12 IST)
Updated Date: Wed, 23 Sep 2020 (10:14 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗೋವಾದಲ್ಲಿ ಉಳಿದವರು ಕಂಡಂತೆ ಸಿನಿಮಾದ ಮುಂದುವರಿದ ಭಾಗವಾಗಿರುವ ರಿಚ್ಚಿ ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ ಅದೀಗ ವಿವಾದದಲ್ಲಿದೆ.
ಕಾರಣ ರಕ್ಷಿತ್ ನಿಗದಿ ಮಾಡಿರುವ ‘ರಿಚ್ಚಿ’ ಟೈಟಲ್ ನ್ನು ಇಟ್ಟುಕೊಂಡು ಹೊಸಬರ ತಂಡವೊಂದು ಸದ್ದಿಲ್ಲದೇ ಸಿನಿಮಾ ಮಾಡಿ ಬಿಡುಗಡೆಗೆ ಕಾದಿದೆ. ಒಂದೂವರೆ ವರ್ಷದ ಹಿಂದೆಯೇ ಹೊಸಬರ ತಂಡ ರಿಚ್ಚಿ ಟೈಟಲ್ ನ್ನು ನೋಂದಣಿ ಮಾಡಿಕೊಂಡಿತ್ತು ಎನ್ನಲಾಗಿದೆ. ಇದೀಗ ರಕ್ಷಿತ್ ಕೂಡಾ ಅದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿರುವುದು ಸ್ವಲ್ಪ ಗೊಂದಲವುಂಟು ಮಾಡಿದೆ. ಇದಕ್ಕೆ ಯಾವ ರೀತಿ ತೆರೆ ಬೀಳುತ್ತದೆ ಕಾದು ನೋಡಬೇಕು.