ಗ್ರಾಹಕರಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ 5 ಹೊಸ ಪ್ಲಾನ್

ಗುರುವಾರ, 9 ಮೇ 2019 (07:40 IST)
ಬೆಂಗಳೂರು : ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸಿ ಬಾರೀ ಸುದ್ದಿಯಲ್ಲಿರುವ ಜಿಯೋ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ 5 ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ.
ಮೊದಲನೇಯದಾಗಿ ರೂ. 149 ಪ್ಲಾನ್ ಬಿಡುಗಡೆ ಮಾಡಿದ ಜಿಯೋ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಒದಗಿಸುತ್ತಿದೆ. ಬಳಕೆದಾರರು 100 ಎಸ್‌.ಎಂ.ಎಸ್ ಸೌಲಭ್ಯ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.


ಜಿಯೋ ಪರಿಚಯಿಸಿರುವ ಇನ್ನೊಂದು ಪ್ಲಾನ್ ರೂ. 349 ಅಡಿಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ಸಿಗಲಿದೆ. ಇದು ಅನ್ಲಿಮಿಟೆಡ್ ಕರೆ, ಸ್ಥಳೀಯ, ಎಸ್ಟಿಡಿ ಕರೆ ಒಳಗೊಂಡಿದೆ. ಇದು 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಜಿಯೋದ ರೂ. 399 ಹಾಗೂ 449 ಯೋಜನೆಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ, 100 ಎಸ್‌.ಎಂ.ಎಸ್ ಹಾಗು ಅನಿಯಮಿತ ಸ್ಥಳೀಯ, ಎಸ್ಟಿಡಿ ಕರೆ ಸೌಲಭ್ಯ ಸಿಗಲಿದೆ. ರೂ. 399ರ ಯೋಜನೆ 84 ದಿನಗಳ ಹಾಗು ರೂ. 449 ಯೋಜನೆ 91 ದಿನಗಳ ವ್ಯಾಲಿಡಿಟಿ ಹೊಂದಿದೆ.


ರೂ. 1699 ಯೋಜನೆ 365 ದಿನಗಳ ಅಂದರೆ ಬರೋಬ್ಬರಿ ಒಂದು ವರ್ಷದ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆಗಳು ಸಿಗಲಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡೊನಾಲ್ಡ್‌ ಟ್ರಂಪ್‌ ಫೋಟೋವಿರುವ ಈ ಟಿಶ್ಯೂ ಪೇಪರ್‌ ಬೆಲೆ ಎಷ್ಟು ಗೊತ್ತಾ?