ನವದೆಹಲಿ : ಒಂದೇ ಬಾರಿ 100 ಕ್ಕೂ ಹೆಚ್ಚು ಸೇವೆಗಳು ಒಟ್ಟಿಗೆ ಸಿಗುವಂತಹ ಹೊಸ ಸೇವೆಯನ್ನು ಗ್ರಾಹಕರಿಗೆ ನೀಡಲು ರಿಲಾಯನ್ಸ್ ಜಿಯೋ ಕಂಪೆನಿ ತಯಾರಿ ನಡೆಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಕಂಪನಿ ಸೂಪರ್ ಆಪ್ ಮೇಲೆ ಕೆಲಸ ಮಾಡಲಿದ್ದು, ಇ-ವಾಣಿಜ್ಯ, ಆನ್ಲೈನ್ ಬುಕ್ಕಿಂಗ್ ಮತ್ತು ಪೇಮೆಂಟ್ ಮುಂತಾದ ಎಲ್ಲ ಸೇವೆ ಒಂದೇ ಕಡೆ ಸಿಗುವ ಕಾರಣ ಈ ಹೊಸ ಸೇವೆ ಗ್ರಾಹಕರಿಗೆ ತುಂಬಾ ಸಹಾಯಕವಾಗಿದೆ ಎನ್ನಲಾಗಿದೆ.
ಪೇಟಿಎಂ, ಫ್ಲಿಪ್ಕಾರ್ಟ್, ಸ್ನ್ಯಾಪ್ ಡೀಲ್ ಕಂಪನಿಗಳು ಭಾರತದಲ್ಲಿ ಖುದ್ದು WeChat ತಯಾರಿಕೆಯಲ್ಲಿ ವಿಫಲವಾಗಿವೆ. ಆದರೆ ರಿಲಾಯನ್ಸ್ ಇದರಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಂಪನಿ ಇಂಟೆಲಿಜೆನ್ಸ್ ಗ್ರೂಪ್ ನ ಮುಖ್ಯಸ್ಥ ರಾಮ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.