ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಆಪ್

ಭಾನುವಾರ, 20 ಜನವರಿ 2019 (06:56 IST)
ನವದೆಹಲಿ : ರಿಲಾಯನ್ಸ್ ಜಿಯೋ ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬ್ರೌಸರ್ ಆಪ್ ಎಂಬ ಹೊಸ ಆಪ್ ವೊಂದನ್ನು ಬಿಡುಗಡೆ ಮಾಡಿದೆ.


ಆಂಡ್ರಾಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿರುವ ಈ ಆಪ್ ನ್ನು ಬಳಕೆ ಮಾಡಲು ಗ್ರಾಹಕರ ಬಳಿ ಜಿಯೋ ಸಿಮ್ ಇರಬೇಕೆಂದಿಲ್ಲ. ಭಾರತೀಯ ಬಳಕೆದಾರರಿಗೆ ಅನುಕೂಲವಾಗಲೆಂದು ಜಿಯೋ ಈ ಆಪ್ ನ್ನು ಶುರು ಮಾಡಿರುವುದಾಗಿ ಕಂಪನಿ ತಿಳಿಸಿದೆ. ಇದು ಹಿಂದಿ, ಕನ್ನಡ, ತೆಲುಗು, ತಮಿಳು, ಬಂಗಾಳಿ ಭಾಷೆಯಲ್ಲಿ ಲಭ್ಯವಿದೆ.


ಕೇವಲ 4.8 ಎಂಬಿ ಗಾತ್ರದ ಈ ಜಿಯೋ ಬ್ರೌಸರ್ ಆಪ್ ಆನ್ ಮಾಡಿದರೆ ರಾಜಕೀಯ, ಮನರಂಜನೆ, ಕ್ರೀಡೆ ಸೇರಿದಂತೆ ಎಲ್ಲ ಮಾಹಿತಿ ಸಿಗಲಿದೆ. ಖಾಸಗಿ ಬ್ರೌಸಿಂಗ್ ವ್ಯವಸ್ಥೆಯನ್ನೂ ನೀಡಲಾಗಿದೆ. ಬಳಕೆದಾರರು, ಬ್ರೌಸರ್ ಲಿಂಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವ್ಯವಸ್ಥೆಯನ್ನೂ ಇದರಲ್ಲಿದೆ. ವಾಯ್ಸ್ ಇನ್ಪುಟ್ ಸೌಲಭ್ಯ ಕೂಡ ನೀಡಲಾಗಿದ್ದು,  ಧ್ವನಿ ಮೂಲಕ ಕಮಾಂಡ್ ನೀಡಿ ನೀವು ನಿಮಗೆ ಬೇಕಾದ ವಿಷಯವನ್ನು ಹುಡುಕಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ ಬ್ರೈನ್ ವಾಶ್ ಮಾಡಿದ್ದಾರೆ- ದಿನೇಶ್ ಗುಂಡೂರಾವ್