ಜಿಯೋದಿಂದ ಗ್ರಾಹಕರಿಗೆ ಸಿಗಲಿದೆ 300 ರೂಪಾಯಿಗಿಂತ ಕಡಿಮೆ ಬೆಲೆಯ ಈ ಮೂರು ಆಫರ್ ಗಳು

ಸೋಮವಾರ, 19 ನವೆಂಬರ್ 2018 (12:42 IST)
ನವದೆಹಲಿ : ರಿಲಾಯನ್ಸ್ ಜಿಯೋ ಕಂಪೆನಿ ತನ್ನ ಗ್ರಾಹಕರಿಗೆ 300 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಆಫರ್ ಗಳನ್ನು ನೀಡಿದೆ.

ಅದರಲ್ಲಿ ಮೊದಲನೇಯದಾಗಿ 149 ರೂಪಾಯಿ ಪ್ಲಾನ್. ಇದರಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ ಪ್ರತಿ ದಿನ 100 ಎಸ್‌ಎಂಎಸ್ ಸೌಲಭ್ಯ  ಸಿಗಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

 

ಅದೇರೀತಿ ಜಿಯೋ 198 ರೂಪಾಯಿಯ ಇನ್ನೊಂದು ಪ್ಲಾನ್ ಕೂಡ ಬಿಡುಗಡೆ ಮಾಡಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಗ್ರಾಹಕರಿಗೆ 2 ಜಿಬಿ ಡೇಟಾ ಪ್ರತಿದಿನ ಸಿಗಲಿದೆ. ಅನಿಯಮಿತ ಕರೆ ಜೊತೆ 100 ಎಸ್‌ಎಂಎಸ್ ಲಭ್ಯವಾಗಲಿದೆ.

 

ಇನ್ನೊಂದು ಪ್ಲಾನ್ 299 ರೂಪಾಯಿಯದ್ದು. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 3 ಜಿಬಿ ಡೇಟಾ ಸಿಗಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ 100 ಎಸ್‌ಎಂಎಸ್ ಪ್ರತಿದಿನ ಸಿಗಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತ್ನಿಯ ಗೊರಕೆ ಕಾಟ ತಾಳಲಾರದೇ ಪತಿರಾಯ ಮಾಡುತ್ತಿದ್ದೇನು ಗೊತ್ತಾ?