ಹೊಸ ವರ್ಷಕ್ಕೆ ಈ ಹಳೆ ಸಿಸ್ಟಂ ನಲ್ಲಿ ಬಂದ್ ಆಗಲಿದೆ ವಾಟ್ಸಾಪ್

ಸೋಮವಾರ, 24 ಡಿಸೆಂಬರ್ 2018 (07:34 IST)
ನವದೆಹಲಿ : ವಾಟ್ಸಾಪ್ ಬಳಕೆದಾರರಿಗೊಂದು ಕಹಿಸುದ್ದಿ. ಡಿಸೆಂಬರ್ 31, 2018 ರ ನಂತರ  ವಾಟ್ಸಾಪ್ ಬಂದ್ ಆಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.


ಮಾಹಿತಿ ಪ್ರಕಾರ, ಡಿಸೆಂಬರ್ 31, 2018 ರ ನಂತರ ಕೆಲ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ವಾಟ್ಸಾಪ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.  Nokia S40 ಬಳಕೆದಾರರು ಜನವರಿ 1, 2019 ರ ನಂತರ ವಾಟ್ಸಾಪ್ ಬಳಕೆ ಸಾಧ್ಯವಿಲ್ಲ.


ವಾಟ್ಸಾಪ್, ಆಂಡ್ರಾಯ್ಡ್ 2, 3, 7 ಮತ್ತು ಇದಕ್ಕಿಂತ ಹಳೆಯ ಸಿಸ್ಟಂನಲ್ಲಿ ಕೆಲಸ ಮಾಡುವುದಿಲ್ಲ. ಇದರ ಜೊತೆಗೆ iPhone iOS7 ಹಾಗೂ ಇದರ ಹಳೆ ಆಪರೇಟಿಂಗ್ ಸಿಸ್ಟಂನಲ್ಲಿ ಕೂಡ ಕೆಲಸ ನಿಲ್ಲಿಸಲಿದೆ. ಈ ಹಳೆ ಸಿಸ್ಟಂಗೆ ಅನುಗುಣವಾಗಿ ಫೀಚರ್ ಸಿದ್ಧಪಡಿಸಲು ಸಾಧ್ಯವಿಲ್ಲ. ಹಾಗಾಗಿ ವಾಟ್ಸಾಪ್ ಸೇವೆ ನಿಲ್ಲಿಸಲಿದ್ದೇವೆ ಎಂದು ಕಂಪನಿ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಲ್ಲಿನ ಕೆಲ ಮಸಾಜ್ ಸೆಂಟರ್ ಒಳ ಹೋದ್ಮೇಲೆ 30 ನಿಮಿಷಗಳ ಬಳಿಕ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ