ರಾಂಗ್ ರೂಟ್ ನಲ್ಲಿ ಬಂದ ಕಾರು ಚಾಲಕ ಟ್ರಾಫಿಕ್ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಮಾಡಿದ್ದೇನು ಗೊತ್ತಾ?

ಶುಕ್ರವಾರ, 21 ಡಿಸೆಂಬರ್ 2018 (07:26 IST)
ನವದೆಹಲಿ : ವ್ಯಕ್ತಿಯೊಬ್ಬ ಕಾರು ಚಲಾಯಿಸಿಕೊಂಡು ರಾಂಗ್ ರೂಟ್ ನಲ್ಲಿ ಬಂದಿದ್ದಲ್ಲದೇ ಇದನ್ನು ತಡೆಯಲು ಬಂದ ಪೊಲೀಸ್ ಸಿಬ್ಬಂದಿಗೆ ಗುದ್ದಿದ ಘಟನೆ ದೆಹಲಿಯ ಸಿಗ್ನೇಚರ್ ಟವರ್ ಚೌಕ್ ಬಳಿ ನಡೆದಿದೆ.

ಸಿಗ್ನೆಚರ್ ಟವರ್ ಚೌಕ್ ಬಳಿ ಎಸ್‍ಯುವಿ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದದನ್ನು ಗಮನಿಸಿದ ಟ್ರಾಫಿಕ್ ಸಿಬ್ಬಂದಿ ತಡೆದು ನಿಲ್ಲಿಸಿ ವಾಹನದ ದಾಖಲಾತಿ ತೋರಿಸಲು ಹೇಳಿದ್ದಾರೆ. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಲಕ ಕಾರ್ ರಿವರ್ಸ್ ತೆಗೆದುಕೊಂದು ಪರಾರಿಯಾಗಲು ಯತ್ನಿಸಿದ್ದಾನೆ.

 

ಈ ವೇಳೆ ಆತ ತಪ್ಪಿಸಿಕೊಂಡು ಹೋಗದಿರಲೆಂದು ಪೊಲೀಸ್ ಅಧಿಕಾರಿ ಕಾರಿನ ಎದುರು ನಿಂತು ಬೋನೆಟ್ ಗೆ ಒರಗಿದ್ದಾರೆ. ಆಗ ಆತ ಅಧಿಕಾರಿಯನ್ನು ಎಳೆದುಕೊಂಡು ಕಾರನ್ನು ಸ್ವಲ್ಪ ದೂರದ ತನಕ ತೆಗೆದುಕೊಂಡು ಹೋಗಿದ್ದಾನೆ. ಆದರೂ ಕೊನೆಗೆ ಕಾರಿನ ಚಾಲಕನನ್ನು ನಿಯಂತ್ರಿಸುವಲ್ಲಿ ಪೊಲೀಸ್ ಅಧಿಕಾರಿ ಯಶಸ್ವಿಯಾಗಿದ್ದಾರೆ.

 

ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಆರೋಪಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹತ್ತು ರೂ. ನಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರ ಬಂಧನ