ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದ ಬಿಜೆಪಿ. ಈ ಬಗ್ಗೆ ಕೇಂದ್ರ ಸಚಿವ ರಾಮದಾಸ್ ಹೇಳಿದ್ದೇನು?

ಬುಧವಾರ, 19 ಡಿಸೆಂಬರ್ 2018 (14:59 IST)
ನವದೆಹಲಿ : ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು, ಆದರೆ ಇದುವರೆಗೂ ಹಣ ಜಮಾ ಆಗಿಲ್ಲ.


ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮದಾಸ್ ಆಠಾವಳೆ ಅವರು,’ ಕಳೆದ ಲೋಕಸಭೆ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಎಲ್ಲರ ಖಾತೆಗೂ 15 ಲಕ್ಷ ರೂ. ಬರಲಿದೆ, ಆದರೆ ನಿಧಾನವಾಗಿ ಬಂದು ಸೇರಲಿದೆ’ ಎಂದು ಹೇಳಿದ್ದಾರೆ.


ಅಲ್ಲದೇ ‘ಈ ಸಂಬಂಧ ಹಣ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕೇಳಿಕೊಳ್ಳಲಾಯಿತು, ಆದರೆ ಅವರು ಹಣ ನೀಡಲಿಲ್ಲ. ಹೀಗಾಗಿ ಅಲ್ಲಿಂದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೂ ಈ ಭರವಸೆಯನ್ನು ಈಡೇರಿಸುವುದಾಗಿ ಕೇಂದ್ರ ಸಚಿವ ರಾಮದಾಸ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಗತ್ಯವಿಲ್ಲದ ಕಡೆ ಆಧಾರ ಕಾರ್ಡ್ ಕೇಳುವ ಕಂಪೆನಿಗಳಿಗೆ ಜೈಲುಶಿಕ್ಷೆ ವಿಧಿಸಲು ಮುಂದಾದ ಕೇಂದ್ರ ಸರ್ಕಾರ