Select Your Language

Notifications

webdunia
webdunia
webdunia
webdunia

ಮೂರು ವರ್ಷದ ಬಾಲಕಿಯ ಮೇಲೆ 40 ವರ್ಷದ ಕಾಮುಕನಿಂದ ಅತ್ಯಾಚಾರ

ಮೂರು ವರ್ಷದ ಬಾಲಕಿಯ ಮೇಲೆ 40 ವರ್ಷದ ಕಾಮುಕನಿಂದ  ಅತ್ಯಾಚಾರ
ನವದೆಹಲಿ , ಬುಧವಾರ, 19 ಡಿಸೆಂಬರ್ 2018 (07:17 IST)
ನವದೆಹಲಿ : 40 ವರ್ಷದ ಕಾಮುಕನೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.


ದೆಹಲಿಯ ಬಿಂದಾಪುರ ಪ್ರದೇಶದಲ್ಲಿ 40 ವರ್ಷದ ಕಾಮುಕನೊಬ್ಬ ಪಕ್ಕದ ಮನೆಯಲ್ಲಿದ್ದ ಮಗು ಆಟವಾಡುತ್ತಿದ್ದ ವೇಳೆ ಚಾಕೋಲೇಟ್ ನೀಡುವ ಆಸೆ ತೋರಿಸಿ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.


ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಮಗುವನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಮಗುವಿನ ಖಾಸಗಿ ಅಂಗ ಸೇರಿದಂತೆ ದೇಹದ ತುಂಬೆಲ್ಲ ಗಾಯಗಳಾಗಿದ್ದು ಬಾಲಕಿ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂದಿದೆ.


ಈ ಘಟನೆಯ ಬಗ್ಗೆ ಬಾಲಕಿಯ ಪೋಷಕರು ದೂರು ನೀಡಿದ್ದು,  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕ ಎನ್ನತ್ತಿದ್ದವಳ ಮೇಲೆಯೇ ತನ್ನ ಪತಿಯಿಂದ ಅತ್ಯಾಚಾರ ಮಾಡಿಸಿದ ಪಾತಕಿ ಅರೆಸ್ಟ್