Publish Date: Wed, 19 Dec 2018 (07:13 IST)
Updated Date: Wed, 19 Dec 2018 (07:15 IST)
ಭೋಪಾಲ್ : ಮದುವೆ ಮಾಡಿಸುವುದಾಗಿ ಸುಳ್ಳು ನೆಪ ಹೇಳಿ ಬಾಲಕಿಯನ್ನು ಕರೆದೊಯ್ದು ಮನೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದ ಆತನ ಪತ್ನಿಯನ್ನು ಭೋಪಾಲ್ ನ ಕೋಲಾರ್ ಪೊಲೀಸರು ಬಂಧಿಸಿದ್ದಾರೆ.
38 ವರ್ಷದ ದಿನೇಶ್ ಪ್ರಜಾಪತಿ ಹಾಗೂ ಆತನ ಪತ್ನಿ ನಿಧಿ ಪ್ರಜಾಪತಿ ಬಂಧಿತ ಆರೋಪಿಗಳಾಗಿದ್ದು, ಸಂತ್ರಸ್ತ ಬಾಲಕಿ ಹಾಗೂ ಆರೋಪಿ ನಿಧಿ ಕುಟುಂಬದವರು ಒಂದೇ ಕಡೆ ವಾಸವಿದ್ದ ಕಾರಣ ಪರಿಚಯದವರಾಗಿದ್ದರು. ನಿಧಿಯನ್ನು ಅಕ್ಕ ಎಂದು ಕರೆಯುತ್ತಿದ್ದ ಬಾಲಕಿಗೆ ನಮ್ಮಲ್ಲಿ ಎರಡು ಮದುವೆಯಾಗುವ ಸಂಪ್ರದಾಯ ಇದೆ, ನನ್ನ ಗಂಡನಿಗೆ ನಿನ್ನನ್ನು ಮದುವೆ ಮಾಡಿಸುವೆ ಎಂದು ಆಕೆಯನ್ನು ಪುಸಲಾಯಿಸಿ ಕರೆದೊಯ್ಯದ ನಿಧಿ ಮನೆಯೊಂದರಲ್ಲಿ ಕೂಡಿಟ್ಟು ನಾಲ್ಕು ತಿಂಗಳ ಕಾಲ ನಿರಂತರವಾಗಿ ಆಕೆಯ ಪತಿಯಿಂದ ಅತ್ಯಾಚಾರ ಮಾಡಿಸಿದ್ದಾಳೆ.
ನಿಧಿಯ ಮೋಸದ ಜಾಲ ಅರಿತ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಕೋಲಾರ್ ಪೊಲೀಸರಿಗೆ ದೂರು ನೀಡಿದ್ದಳು. ಆಕೆಯ ದೂರಿನ ಆಧಾರಾದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಿನೇಶ್ ಪ್ರಜಾಪತಿ ಹಾಗೂ ಆತನ ಪತ್ನಿ ನಿಧಿ ಪ್ರಜಾಪತಿ ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.