ಬಿಜೆಪಿಗೆ ಶಾಕ್; ಎನ್‌ ಡಿಎ ಮಿತ್ರಪಕ್ಷ ಕಾಂಗ್ರೆಸ್ ನ ಮಹಾಘಟಬಂಧನ್ ಗೆ ಸೇರ್ಪಡೆ

ಶುಕ್ರವಾರ, 21 ಡಿಸೆಂಬರ್ 2018 (07:11 IST)
ನವದೆಹಲಿ : ಬಿಜೆಪಿಯ ಮಿತ್ರಪಕ್ಷವಾಗಿರುವ ಎನ್‌ ಡಿಎ ಜತೆ ಇದ್ದ ಪಕ್ಷವೊಂದು ಇದೀಗ ಕಾಂಗ್ರೆಸ್ ಪಕ್ಷದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ.

ಹೌದು. ಎನ್‍ಡಿಎ ಮಿತ್ರಕೂಟದಲ್ಲಿದ್ದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್.ಎಲ್.ಎಸ್.ಪಿ) ಮುಖ್ಯಸ್ಥ ಉಪೇಂದ್ರ ಖುಷ್ವಾಲಾ ಮಹಾಘಟಬಂಧನ್ ಜೊತೆ ಸೇರ್ಪಡೆ ಆಗಿದ್ದಾರೆ. ಬಿಜೆಪಿ ಪಕ್ಷ ದೇಶದ ನೈಜ ಸಮಸ್ಯೆಗಳನ್ನು ಬಿಟ್ಟು ಬೇರೆಡೆ ಗಮನ ಹರಿಸಿದೆ. ಇದರ ಭಾಗವಾಗಿರುವುದಕ್ಕೆ ನನಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವರಾಗಿದ್ದ ಉಪೇಂದ್ರ ಖುಷ್ವಾಲಾ ಡಿಸೆಂಬರ್ 10 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ ಡಿಎ ಒಕ್ಕೂಟದಿಂದ ಹೊರ ಬಂದಿದ್ದರು.

 

ಬಳಿಕ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿದ ಉಪೇಂದ್ರ ಖುಷ್ವಾಲಾ ಮಹಾಘಟಬಂದನ್ ಸೇರ್ಪಡೆ ಆಗಿದ್ದಾರೆ. ಆರ್‌ಎಲ್ ಎಸ್‌ಪಿ ಕಾಂಗ್ರೆಸ್ ಒಕ್ಕೂಟದ ಜತೆ ಹೋಗಿದ್ದ ಕಾರಣ ಬಿಜೆಪಿಗೆ ಬಿಹಾರದಲ್ಲಿ ಹಿನ್ನಡೆ ಆಗುವುದೆಂತೂ ಖಚಿತ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಹಿಂಜಾವೇ ಕಾರ್ಯಕರ್ತರು ಮಾಡಿದ್ದೇನು?