ರಾಹುಲ್ ಗಾಂಧಿ ಜೊತೆಗೆ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್ ನಾಯಕರು; ಕಾಂಗ್ರೆಸ್ ನ 8 ಶಾಸಕರಿಗೆ ಸಚಿವಗಿರಿ ಪಕ್ಕಾ

ಶನಿವಾರ, 22 ಡಿಸೆಂಬರ್ 2018 (06:26 IST)
ನವದೆಹಲಿ : ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರುಗಳೊಂದಿಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ಸಭೆ ನಡೆಸಿ ಕಾಂಗ್ರೆಸ್ 8 ಶಾಸಕರಿಗೆ ಸಚಿವಗಿರಿ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕಾಂಗ್ರೆಸ್ ನ ಎಷ್ಟು ಶಾಸಕರಿಗೆ, ಹಾಗೂ ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ನಿರ್ಧಾರ ಮಾಡಲು  ರಾಜ್ಯ ಕಾಂಗ್ರೆಸ್ ನಾಯಕರುಗಳೊಂದಿಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಡಾ ಜಿ ಪರಮೇಶ್ವರ್. ಮಾಜಿ ಸಿಎಂ ಸಿದ್ದರಾಮಯ್ಯ ಮುಂತಾದವರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

 

ಈ ಸಭೆಯಲ್ಲಿ ಒಟ್ಟು 8 ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು ಖಚಿತವಾಗಿದ್ದು, ಶನಿವಾರ ಸಂಜೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ನಿರ್ಧರಿಸಲಾಗಿದೆ. ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸಿ.ಎಸ್.ಶಿವಳ್ಳಿ, ಇ.ತುಕಾರಾಂ, ಎಂ.ಟಿ.ಬಿ.ನಾಗರಾಜ್, ರಹೀಂಖಾನ್, ಪಿ.ಟಿ.ಪರಮೇಶ್ವರ್ ನಾಯ್ಕ್ ಮತ್ತು ಎಂ.ಬಿ.ಪಾಟೀಲ್ ಗೆ ಮಂತ್ರಿ ಸೀಟು ಸಿಗುವುದು ಖಚಿತ ಆಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಷಾಹಾರ ಸೇವಿಸಿ ನಾಲ್ವರ ಸಾವು!