ವಿಷಾಹಾರ ಸೇವಿಸಿ ನಾಲ್ವರ ಸಾವು!

ಶುಕ್ರವಾರ, 21 ಡಿಸೆಂಬರ್ 2018 (17:16 IST)
ಸುಳ್ವಾಡಿಯ ಮಾರಮ್ಮ ದೇವಿ ದೇಗುಲದ ವಿಷ ಪ್ರಸಾದ ಸೇವಿಸಿ 16 ಮಂದಿ ಮೃತಪಟ್ಟಿರುವ ಧಾರುಣ ಘಟನೆ ಜನರ ಮನದಿಂದ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಲ್ಲುತೊಟ್ಲು ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಮೂವರ ಸ್ಥಿತಿ ಗಂಭೀರವಾಗಿರುವ  ದಾರುಣ ಘಟನೆ ನಡೆದಿದೆ.

ವಿಷಪೂರಿತ ಆಹಾರ ಸೇವಿಸಿ ಚಿತ್ತಪ್ಪ (80) ಶಶಿಧರ್ (40) ಹೇಮಲತಾ (30) ಹಾಗೂ ಭಾಗ್ಯಮ್ಮ (35) ಮೃತಪಟ್ಟಿದ್ದಾರೆ. ಇವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದ ತಂದೆ ಮಕ್ಕಳು. ಸದಾನಂದ (13) ಮುತ್ತುರಾಜ್ (14) ಹಾಗೂ ಅಜಯ್ (14) ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಶಶಿಧರ್ ಹಾಗೂ ಭಾಗ್ಯಮ್ಮ ಚಿತ್ತಪ್ಪನ ಮಕ್ಕಳು. ಹೇಮಲತಾ ಸದಾಶಿವನ ಹೆಂಡತಿ (ಚಿತ್ತಪ್ಪನ ಸೊಸೆ). ಹೇಮಲತಾನ ಮಕ್ಕಳು (ಚಿತ್ತಪ್ಪನ ಮೊಮ್ಮಕ್ಕಳು) ಮುತ್ತುರಾಜ್, ಸುಮಲತಾ, ಅಜಯ್ ತೀವ್ರ ಅಸ್ವಸ್ಥಗೊಂಡಿದ್ದು ಇವರನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಿತ್ತಪ್ಪನ ಹೆಂಡತಿ ಶಾಂತಮ್ಮ ಅನಾರೋಗ್ಯದ ಕಾರಣ ಊಟ ಮಾಡರಲಿಲ್ಲ, ಇನ್ನೊಬ್ಬ ಮಗ ಸದಾಶಿವ ಮನೆಯಲ್ಲಿಯೇ ಇರಲಿಲ್ಲ, ಹೀಗಾಗಿ ಸದಾಶಿವ ಹಾಗೂ ಶಾಂತಮ್ಮ ದುರಂತದಿಂದ ಪಾರಾಗಿದ್ದಾರೆ. ಸಂಬಂಧಿಕರಿಂದ ಮುಗಿಲು ಮುಟ್ಟಿದ ಆಕ್ರಂದನ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಶ್ ಬ್ಯಾನರ್ ಗೆ ಲಿಂಬೆಹಣ್ಣಿನ ಮಾಲೆ!