Publish Date: Fri, 21 Dec 2018 (16:28 IST)
Updated Date: Fri, 21 Dec 2018 (16:30 IST)
ಕೆಜಿಎಫ್ ಚಿತ್ರ ಪ್ರದರ್ಶನಕ್ಕೂ ಮುನ್ನ ನಟ ಯಶ್ ಬ್ಯಾನರ್ ಗೆ ಅಭಿಮಾನಿಗಳು ಲಿಂಬೆಹಣ್ಣಿನ ಮಾಲೆ ಹಾಕಿಸಂಭ್ರಮ ಪಟ್ಟರು.
ಚಿತ್ರದುರ್ಗದಲ್ಲಿ ಬೆಳಿಗ್ಗೆ 6 ಗಂಟೆಯ ಶೋಗೆ ಹೌಸ್ ಫುಲ್ ಆಗಿ ಜನರು ಬಂದಿದ್ದರು. ಯಶ್ ಬ್ಯಾನರ್ ಗೆ ಲಿಂಬೆಹಣ್ಣಿನ ಮಾಲೆ ಹಾಕಿ ಸಂಭ್ರಮವನ್ನು ಅಭಿಮಾನಿಗಳು ಪಟ್ಟರು.
ಕುಂಬಳಕಾಯಿ ಒಡೆದು ಸಿನಿಮಾಗೆ ಶುಭ ಹಾರೈಸಿದ ಅಭಿಮಾನಿ ಬಳಗ, ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಸಂಭ್ರಮದ ಹಾಗೂ ಹಬ್ಬದ ವಾತಾವರಣ ನಿರ್ಮಾಣಮಾಡಿದ್ದರು. ಪಟಾಕಿ ಸಿಡಿಸಿ ಸಿನಿಮಾಗೆ ಶುಭವನ್ನು ಅಭಿಮಾನಿಗಳು ಕೋರಿದರು.