Publish Date: Fri, 21 Dec 2018 (15:52 IST)
Updated Date: Fri, 21 Dec 2018 (15:54 IST)
ವಿವಾದದ ನಡುವೆಯೂ ಬಹುತೇಕ ಕಡೆಗಳಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ಯಶ್ ಅಭಿಮಾನಿಗಳಲ್ಲಿದ್ದ ಆತಂಕ ದೂರವಾಗಲು ಚಿತ್ರ ಬಿಡುಗಡೆಗೊಂಡಿದೆ. ತುಮಕೂರು ನಗರದ ಮೂರು ಚಿತ್ರಮಂದಿಗಳಲ್ಲಿ ಚಿತ್ರಪ್ರದರ್ಶನ ಕಾಣುತ್ತಿದೆ.
ಕಿಕ್ಕಿರಿದು ಸೇರಿರುವ ರಾಕಿಂಕ್ ಸ್ಟಾರ್ ಅಭಿಮಾನಿಗಳು, ಯಶ್ ಕಟೌಟಿಗೆ ಕ್ಷೀರಾಭಿಷೇಕ ಮಾಡಿ ತಮ್ಮ ಅಭಿಮಾನ ಮೆರೆದರು.
ನ್ಯಾಯಲಯದ ಮೆಟ್ಟಿಲೇರಿದ್ದ ಕೆಜಿಎಫ್ ಸಿನಿಮಾ ಬಿಡುಗಡೆ ಬಗ್ಗೆ ಅಭಿಮಾನಿಗಳು ಆತಂಕದಲ್ಲಿದ್ದರು. ಆದರೆ ಚಿತ್ರ ಬಿಡುಗಡೆಗೊಂಡಿದ್ದರಿಂದಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಯಶ್ ಫ್ಯಾನ್ಸ್.