Publish Date: Fri, 21 Dec 2018 (14:26 IST)
Updated Date: Fri, 21 Dec 2018 (14:28 IST)
ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಬಿಡುಗಡೆಗೊಂಡಿರುವ ಕೆಜಿಎಫ್ ಚಿತ್ರ ಹವಾ ಸೃಷ್ಠಿಮಾಡಿದೆ. ಆಂಧ್ರಗಡಿಯಲ್ಲಿ ಮೊದಲ ಬಾರಿ ಕನ್ನಡ ಚಿತ್ರ ಬಿಡುಗಡೆಗೊಂಡಿದ್ದು ಅಷ್ಟೇ ಅಲ್ಲ, ಮೊದಲ ಬಾರಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಕೆಜಿಎಫ್ ಚಿತ್ರ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ವಾಣಿ ಚಿತ್ರಮಂದಿರ ಮತ್ತು ತಾಲೂಕಿನ 5 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಥಿಯೇಟರ್ ನಲ್ಲಿ ಮಂಗಳ ಆರತಿ ಬೆಳಗುವ ಮೂಲಕ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.
ಚೂರುಗಾಯಿ ಒಡೆಯುವ ಮೂಲಕ ಶಿಳ್ಳೆಗಳ ಸುರಿಮಳೆಯಾಗಿದೆ. ಚಿಂತಾಮಣಿಯಲ್ಲಿ ಟಿಕೆಟ್ ಸಿಗದೆ ಅಭಿಮಾನಿಗಳ ಪರದಾಟ ಹೇಳತೀರದಾಗಿತ್ತು.
ಚಿಂತಾಮಣಿಯ ಎಸ್ ಎಲ್ ಎನ್ ಥಿಯೇಟರ್ ನಲ್ಲಿ ಪ್ರದರ್ಶನವಾಗ್ತೀರೋ ಕೆಜಿಎಫ್ ಬೆಳಿಗ್ಗೆ 5.30ಕ್ಕೆ ಕೆಜಿಎಫ್ ಚಿತ್ರಪ್ರದರ್ಶನ ಆರಂಭಗೊಂಡಿತು.