Publish Date: Fri, 21 Dec 2018 (08:43 IST)
Updated Date: Fri, 21 Dec 2018 (08:45 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೋರ್ಟ್ ನೀಡಿದ ತಡೆಯಾಜ್ಞೆಯಿಂದ ಕೆಲವು ಕಾಲ ಆತಂಕವುಂಟುಮಾಡಿದರೂ ಇಂದು ಬೆಳಿಗ್ಗೆಯೇ ಎಲ್ಲೆಡೆ ಫಸ್ಟ್ ಶೋ ಪ್ರದರ್ಶನವಾಗಿದ್ದು, ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.
ಬೆಳಗಿನ ಫಸ್ಟ್ ಶೋ ನೋಡಿ ಬಂದ ಪ್ರೇಕ್ಷಕರು ಕೆಜಿಎಫ್ ಗೆ ಜೈ ಎಂದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಸಿನಿಮಾ ಎಲ್ಲೂ ಬೋರ್ ಹೊಡೆಸಲ್ಲ, ಸೂಪರ್ ಡೂಪರ್ ಹಿಟ್ ಗ್ಯಾರಂಟಿ ಎಂದಿದ್ದಾರೆ.
ಮಧ್ಯರಾತ್ರಿಯಿಂದಲೂ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದ ಜನ ಇದೀಗ ಮೊದಲ ಶೋ ಮುಗಿಸಿ ಬಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಔಟ್ ಆಂಡ್ ಔಟ್ ಮಾಸ್ ಸಿನಿಮಾ ಇದಾಗಿದ್ದು, ಇದರ ಜತೆಗೆ ಯಶ್ ಡೈಲಾಗ್ ಡೆಲಿವರಿ, ಫೈಟಿಂಗ್ ಸೀಕ್ವೆನ್ಸ್ ಗಳು, ತಾಯಿ ಸೆಂಟಿಮೆಂಟ್ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ಲೊಕೇಷನ್, ಅದನ್ನು ತೋರಿಸದ ಬಗೆ ಬಗ್ಗೆಯೂ ಪ್ರೇಕ್ಷಕರು ಅಭಿನಂದಿಸಿದ್ದಾರೆ. ಒಟ್ಟಾರೆ ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ವಿಭಿನ್ನ ಸಿನಿಮಾ ಎಂದು ಟ್ವಿಟರಿಗರು ಕೊಂಡಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ