Select Your Language

Notifications

webdunia
webdunia
webdunia
webdunia

ಕೆಜಿಎಫ್ ನಂತರ ಇನ್ನು ಬೇರೆ ಭಾಷೆಯಲ್ಲಿ ಅಭಿನಯಿಸ್ತಾರಾ ಯಶ್?

ಕೆಜಿಎಫ್ ನಂತರ ಇನ್ನು ಬೇರೆ ಭಾಷೆಯಲ್ಲಿ ಅಭಿನಯಿಸ್ತಾರಾ ಯಶ್?
ಬೆಂಗಳೂರು , ಗುರುವಾರ, 20 ಡಿಸೆಂಬರ್ 2018 (10:51 IST)
ಬೆಂಗಳೂರು: ಕೆಜಿಎಫ್ ಚಿತ್ರ ಎಬ್ಬಿಸಿರುವ ಹವಾ ನೋಡಿ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಯಶ್ ಬಗ್ಗೆ ಬೇರೆ ಭಾಷೆಯಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಈ ಪಾಪ್ಯುಲಾರಿಟಿಯಿಂದ ಯಶ್ ಗೆ ಬೇರೆ ಭಾಷೆಯಿಂದಲೂ ಆಫರ್ ಬರುತ್ತಿದೆಯೇ? ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಎದುರಾದಾಗ ಸ್ವತಃ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

‘ಸದ್ಯಕ್ಕೆ ಕಿರಾತಕ-2, ಕೆಜಿಎಫ್ ಚಾಪ್ಟರ್ 2, ರಾಣಾ ಮಾಡುತ್ತಿದ್ದೇನೆ. ಅದಾದ ಬಳಿಕ ಒಳ್ಳೆಯ ಕತೆ, ನಿರ್ಮಾಣ ಸಂಸ್ಥೆ ಯಾವುದೇ ಭಾಷೆಯಿಂದ ಆಫರ್ ಬಂದರೂ ಮಾಡಲು ನನ್ನ ಅಭ್ಯಂತರವಿಲ್ಲ. ಆದರೆ ಇದುವರೆಗೆ ನನಗೆ ಆಫರ್ ಬಂದಿಲ್ಲ’ ಎಂದು ಯಶ್ ಹೇಳಿದ್ದಾರೆ. ಆದರೆ ಕೆಜಿಎಫ್ ನೋಡಿದ ಮೇಲೆ ಆಫರ್ ಬಂದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಸಿನಿಮಾಗಳು ಬಿಡುಗಡೆಯೇ ಆಗ್ತಿಲ್ಲ..! ಫ್ಯಾನ್ಸ್ ಗೆ ಭಾರೀ ಬೇಜಾರು