Select Your Language

Notifications

webdunia
webdunia
webdunia
webdunia

ಸುಧಾರಾಣಿ ಮಗಳು ನಿಧಿ ಬಗ್ಗೆ ಕೇಳಿಬಂದ ಈ ಸುದ್ದಿ ನಿಜವಾ?!

ಸುಧಾರಾಣಿ ಮಗಳು ನಿಧಿ ಬಗ್ಗೆ ಕೇಳಿಬಂದ ಈ ಸುದ್ದಿ ನಿಜವಾ?!
ಬೆಂಗಳೂರು , ಬುಧವಾರ, 19 ಡಿಸೆಂಬರ್ 2018 (10:41 IST)
ಬೆಂಗಳೂರು: ಸುಧಾರಾಣಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಬೊಗಸೆ ಕಂಗಳ ಚೆಲುವೆ ಸುಧಾರಾಣಿ ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ನಂ.1 ಮಟ್ಟಕ್ಕೆ ತಲುಪಿದವರು. ಈಗ ಪೋಷಕ ಪಾತ್ರಗಳನ್ನು ಮಾಡುತ್ತಿರುವ ಸುಧಾರಾಣಿಗೆ ಚೆಂದದ ಪುತ್ರಿಯೊಬ್ಬಳು ಇದ್ದಾಳೆ.


ಆಕೆ ನಿಧಿ. ನೋಡಲು ಥೇಟ್ ಅಮ್ಮನಂತೇ ಕಾಣುವ ಈ ಸುಂದರಿ ಇದೀಗ ತೆರೆ ಮೇಲೆ ಬರುತ್ತಾರಾ? ಹೀಗೊಂದು ಸುದ್ದಿ ಇದೀಗ ಹರಿದಾಡುತ್ತಿದೆ.

ಸುಧಾರಾಣಿ ಪುತ್ರಿ ನಿಧಿ ನಿರ್ದೇಶಕ ಪ್ರೇಮ್ ಮಾಡಲಿರುವ ಹೊಸಬರ ಚಿತ್ರವೊಂದಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಇದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಪ್ರೇಮ್ ತಮ್ಮ ಪತ್ನಿ ರಕ್ಷಿತಾ ಸಹೋದರ ಅಭಿಷೇಕ್ ರನ್ನು ನಾಯಕನಾಗಿಸಿ, ಹೊಸಬರ ಟೀಂ ಕಟ್ಟಿಕೊಂಡು ಸಿನಿಮಾ ಮಾಡಲಿದ್ದು, ಆ ಸಿನಿಮಾಕ್ಕೆ ಸುಧಾರಾಣಿ ಪುತ್ರಿಯನ್ನು ನಾಯಕಿಯಾಗಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಪ್ರೇಮ್ ಆಗಲೀ, ಸುಧಾರಾಣಿ ಕಡೆಯಿಂದಾಗಲೀ ಸ್ಪಷ್ಟನೆ ಬಂದ ಮೇಲೆಯೇ ಎಲ್ಲವೂ ಖಚಿತವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಅನೂಪ್ ಬಂಡಾರಿಗೆ ಓಕೆ ಅಂದ ಕಿಚ್ಚ ಸುದೀಪ್