Select Your Language

Notifications

webdunia
webdunia
webdunia
webdunia

ಶ್ರೀ ಮುರಳಿ ಭರಾಟೆ ಟೀಸರ್ ಬಿಡುಗಡೆ ಮಾಡಿದ ಡಿ ಬಾಸ್ ದರ್ಶನ್ ಹೇಳಿದ್ದು ಕೇಳಿದರೆ ಶಾಕ್ ಆಗುತ್ತೀರಿ!

ಶ್ರೀ ಮುರಳಿ ಭರಾಟೆ ಟೀಸರ್ ಬಿಡುಗಡೆ ಮಾಡಿದ ಡಿ ಬಾಸ್ ದರ್ಶನ್ ಹೇಳಿದ್ದು ಕೇಳಿದರೆ ಶಾಕ್ ಆಗುತ್ತೀರಿ!
ಬೆಂಗಳೂರು , ಬುಧವಾರ, 19 ಡಿಸೆಂಬರ್ 2018 (09:55 IST)
ಬೆಂಗಳೂರು: ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ, ಹೀರೋಗಳು ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ ಎಂದೆಲ್ಲಾ ಗಾಸಿಪ್ ಹರಡುವವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಉತ್ತರ ಕೊಟ್ಟಿದ್ದಾರೆ.


ಮುರಳಿ ಬರ್ತ್ ಡೇ ದಿನವೇ ಟೀಸರ್ ಲಾಂಚ್ ಮಾಡಿದ ದರ್ಶನ್ ‘ಉಗ್ರಂ ಸಿನಿಮಾ ನೋಡಿ ಮುರಳಿಗೆ ಫೋನ್ ಮಾಡಿದ್ದೆ. ಅಂತಹ ಒಂದು ಸಿನಿಮಾ ನನಗೂ ಮಾಡುವ ಆಸೆಯಿತ್ತು. ಅದೊಂದು ಅದ್ಭುತ ಸಿನಿಮಾ’ ಎಂದು ಹೊಗಳಿದರು.

ಇದೇ ಸಂದರ್ಭದಲ್ಲಿ ದರ್ಶನ್ ಮುರಳಿ ಅಭಿನಯದ ಇನ್ನೊಂದು ಚಿತ್ರ ‘ಮದಗಜ’ದ ಫಸ್ಟ್ ಲುಕ್ ಕೂಡಾ ಬಿಡುಗಡೆ ಮಾಡಿದ್ದರು. ಈ ಟೈಟಲ್ ಮೊದಲು ದರ್ಶನ್ ಗೆ ನಿಗದಿಯಾಗಿತ್ತು. ಆದರೆ ಮುರಳಿಗಾಗಿ ದರ್ಶನ್ ಟೈಟಲ್ ಬಿಟ್ಟುಕೊಟ್ಟಿದ್ದರು.

ಈ ಬಗ್ಗೆ ಮಾತನಾಡಿದ ದರ್ಶನ್ ‘ಯಾರು ಸಿನಿಮಾ ಮಾಡಿದರೇನು? ಚೆನ್ನಾಗಿ ಮಾಡಬೇಕು ಅಷ್ಟೇ. ಆ ಟೈಟಲ್ ನಲ್ಲಿ ಯಾರು ಸಿನಿಮಾ ಮಾಡಿದರೂ ನನಗೆ ಬೇಸರವಿಲ್ಲ. ಒಟ್ನಲ್ಲಿ ನಮ್ಮ ಚಿತ್ರರಂಗ ಚೆನ್ನಾಗಿದ್ದರೆ ಸಾಕು’ ಎಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಡಿ ಬಾಸ್ ಮಾತು ಕೇಳಿ ಅಲ್ಲಿ ನೆರೆದಿದ್ದವರು ಶಿಳ್ಳೆ ಹೊಡೆದು ಖುಷಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದ ಜಗ್ಗೇಶ್ ಆಸೆ ಕೊನೆಗೂ ಈಡೇರಿತು!