Publish Date: Tue, 18 Dec 2018 (10:26 IST)
Updated Date: Tue, 18 Dec 2018 (10:27 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಬಹುದಿನಗಳ ಕನಸು ಕೊನೆಗೂ ಈಡೇರಿದೆ. ತಮ್ಮ ಮನೆಗೊಂದು ಹೆಣ್ಣು ಮಗುವಾಗಬೇಕೆಂದು ಬಹಳ ದಿನಗಳಿಂದ ಹೇಳುತ್ತಲೇ ಇದ್ದ ಜಗ್ಗೇಶ್ ಆಸೆ ಈಡೇರಿದೆ.
ಜಗ್ಗೇಶ್ ಸಹೋದರ ರಾಮಚಂದ್ರ ಪುತ್ರನಿಗೆ ಹೆಣ್ಣು ಮಗು ಜನಿಸಿದ್ದು, ಇದೀಗ ಜಗ್ಗೇಶ್ ತಾವು ಹೆಣ್ಣು ಮಗುವಿಗೆ ತಾತನಾದೆ ಎಂದು ಖುಷಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಲ್ಲಿ ಗುರುರಾಜ್ ಗೆ ಮದುವೆಯಾಗಿ ಒಂದು ಅರ್ಜುನ್ ಎಂಬ ಪುತ್ರನಿದ್ದಾನೆ. ಆದರೆ ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳೇ ಇಲ್ಲ ಎಂದು ಜಗ್ಗೇಶ್ ಆಗಾಗ ಹೇಳುತ್ತಿರುತ್ತಾರೆ. ಆ ಕನಸು ಇದೀಗ ಜಗ್ಗೇಶ್ ಸಹೋದರನ ಪುತ್ರನ ಮಗುವಿನ ಮೂಲಕ ಈಡೇರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ