ಅಭಿಮಾನಿಗಳಿಗೆ ಕೊನೆಗೂ ಆ ಗುಡ್ ನ್ಯೂಸ್ ಕೊಟ್ಟ ಬಾಹುಬಲಿ ಪ್ರಭಾಸ್

ಮಂಗಳವಾರ, 18 ಡಿಸೆಂಬರ್ 2018 (09:28 IST)
ಹೈದರಾಬಾದ್: ಬಾಹುಬಲಿ ನಂತರ ಪ್ರಭಾಸ್ ಸಿನಿಮಾಗಳು ತೆರೆ ಮೇಲೆ ಬರಲೇ ಇಲ್ವಲ್ಲಾ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.


ಬಾಹುಬಲಿ ನಂತರ ಪ್ರಭಾಸ್ ‘ಸಾಹೋ’ ಎಂಬ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಆದರೆ ಈ ಸಿನಿಮಾ ಯಾವಾಗ ಪ್ರೇಕ್ಷಕರ ಮುಂದೆ ಬರುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಮುಂದಿನ ವರ್ಷ ಸ್ವಾತಂತ್ರ್ಯದಿನ ಅಂದರೆ ಆಗಸ್ಟ್ 15 ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೀಗ ಸಾಹೋ ಕಡೆಯಿಂದ ಬಂದಿದೆ. ಸುಜೀತ್ ನಿರ್ದೇಶನದ ಸಾಹೋದಲ್ಲಿ ಪ್ರಭಾಸ್ ಜತೆಗೆ ಶ್ರದ್ಧಾ ಕಪೂರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಭರ್ಜರಿ ಫೈಟ್ ಸೀಕ್ವೆನ್ಸ್ ಗಳಿರಲಿವೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಹೀಗಾಗಿ ಈ ಸಿನಿಮಾ ಪ್ರಭಾಸ್ ಅಭಿಮಾನಿಗಳ ಪಾಲಿಗೆ ಭರ್ಜರಿ ಮನರಂಜನೆ ಒದಗಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಜಿಎಫ್ ನೋಡಲು ಬರುವ ಅಭಿಮಾನಿಗಳಿಗೆ ಯಶ್ ಷರತ್ತು!