ಬಾಹುಬಲಿ ಪ್ರಭಾಸ್ ಗೂ ಇಷ್ಟವಾಗಿದೆಯಂತೆ ಕೆಜಿಎಫ್: ಯಶ್ ಇನ್ನು ನ್ಯಾಷನಲ್ ಸ್ಟಾರ್!

ಭಾನುವಾರ, 9 ಡಿಸೆಂಬರ್ 2018 (08:38 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಈಗ ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಹೊಸ ಹವಾ ಎಬ್ಬಿಸಿದೆ. ಮೊನ್ನೆ ರಾತ್ರಿ ಮುಂಬೈನಲ್ಲಿ ಬಾಹುಬಲಿ ಖ್ಯಾತಿ ಪ್ರಭಾಸ್ ರನ್ನು ಯಶ್ ಭೇಟಿಯಾಗಿದ್ದು ಅವರಿಂದಲೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎನ್ನಲಾಗಿದೆ.


ಪ್ರಭಾಸ್ ಕೂಡಾ ತೆಲುಗು ಸಿನಿಮಾಗೆ ಮಾತ್ರ ಸೀಮಿತರಾಗಿದ್ದವರು. ಆದರೆ ಬಾಹುಬಲಿ ಎನ್ನುವ ಒಂದು ಸಿನಿಮಾ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿತು. ಅದೇ ರೀತಿ ಇದೀಗ ಯಶ್ ಕೂಡಾ ಕೆಜಿಎಫ್ ಮೂಲಕ ದೇಶದಾದ್ಯಂತ ಸುದ್ದಿ ಮಾಡುತ್ತಿದ್ದಾರೆ.

ವಿಶೇಷವೆಂದರೆ ಇಂದು ಹೈದರಾಬಾದ್ ನಲ್ಲಿ ಕೆಜಿಎಫ್ ಪ್ರೀ ರಿಲೀಸ್ ಕಾರ್ಯಕ್ರಮವಿದ್ದು, ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಮುಖ್ಯ ಅತಿಥಿಯಾಗಿದ್ದಾರೆ. ಮುಂಬೈನಲ್ಲಿ ಪ್ರಭಾಸ್ ರನ್ನು ಭೇಟಿಯಾದ ವೇಳೆ ಯಶ್ ಬಾಹುಬಲಿ ಸ್ಟಾರ್ ನಟನನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಯಶ್ ಪ್ರೀತಿಗೆ ಪ್ರಭಾಸ್ ಈ ಕಾರ್ಯಕ್ರಮಕ್ಕೆ ಬಂದರೂ ಅಚ್ಚರಿಯಿಲ್ಲ. ಈ ಮೂಲಕ ಕನ್ನಡದ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ಪ್ರೇರಣಾ ನಿಶ್ಚಿತಾರ್ಥ ಇಂದು