Publish Date: Thu, 20 Dec 2018 (10:38 IST)
Updated Date: Thu, 20 Dec 2018 (10:40 IST)
ಬೆಂಗಳೂರು: ಕನ್ನಡದಲ್ಲಿ ಈ ವರ್ಷ ಎಂತೆಂಥದ್ದೋ ಸಿನಿಮಾಗಳು ಬಂದು ಹೋಗಿವೆ. ಆದರೆ ನಮ್ಮ ಡಿ ಬಾಸ್ ಸಿನಿಮಾ ಯಾಕೆ ಒಂದೂ ಬಿಡುಗಡೆಯಾಗಿಲ್ಲ ಎಂಬುದೇ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸದ್ಯಕ್ಕೆ ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿದ್ದು, ಸೆನ್ಸಾರ್ ಕೂಡಾ ಮುಗಿದಿದೆ. ಆದರೆ ಬಿಡುಗಡೆ ಯಾವಾಗ ಎಂಬುದನ್ನು ನಿರ್ಮಾಪಕರು ಇನ್ನೂ ಹೇಳುತ್ತಿಲ್ಲ. ಯಜಮಾನ ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲ.
ಅದರ ಹೊರತಾಗಿ ದರ್ಶನ್ ಇದೀಗ ಹೊಸ ಚಿತ್ರಗಳನ್ನು ಮಾಡುತ್ತಿಲ್ಲ. ಕೊನೆಯ ಬಾರಿಗೆ ಸದ್ದು ಮಾಡಿದ ದರ್ಶನ್ ಸಿನಿಮಾಗಳೆಂದರೆ ಚಕ್ರವರ್ತಿ ಮತ್ತು ತಾರಕ್. ಇದಾದ ಬಳಿಕ ಸುಮಾರು ಒಂದೂವರೆ ವರ್ಷದ ಗ್ಯಾಪ್ ಆಗಿದೆ. ಆದರೂ ಡಿ ಬಾಸ್ ಸಿನಿಮಾ ಬಂದಿಲ್ಲ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಒಂದೂವರೆ ವರ್ಷವಾಯ್ತು. ಇನ್ನೂ ಯಾಕೆ ಅಣ್ಣನ ಸಿನಿಮಾ ಬಂದಿಲ್ಲ ಎಂಬುದೇ ಅಭಿಮಾನಿಗಳ ಬೇಸರವಾಗಿದೆ. ಮುಂದಿನ ವರ್ಷ ಎರಡು ಸಿನಿಮಾಗಳು ರಿಲೀಸ್ ಆಗುವುದರೊಂದಿಗೆ ಅಭಿಮಾನಿಗಳ ನಿರಾಸೆ ಮರೆಯಾಗಬಹುದು ಎಂಬುದು ನಿರೀಕ್ಷೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ