Select Your Language

Notifications

webdunia
webdunia
webdunia
webdunia

ಕೆಜಿಎಫ್ ಬಿಡುಗಡೆಗೆ ತಡೆ: ಮಂಡ್ಯ ಅಭಿಮಾನಿಗಳಿಗೆ ನಿರಾಸೆ

ಕೆಜಿಎಫ್ ಬಿಡುಗಡೆಗೆ ತಡೆ: ಮಂಡ್ಯ ಅಭಿಮಾನಿಗಳಿಗೆ ನಿರಾಸೆ
ಮಂಡ್ಯ , ಗುರುವಾರ, 20 ಡಿಸೆಂಬರ್ 2018 (19:20 IST)
ಕೆಜಿಎಫ್ ಹಬ್ಬಕ್ಕೆ ಸಿದ್ಧಗೊಂಡಿದ್ದ ಸಕ್ಕರೆ ನಾಡಿನ ಜನರು ನಿರಾಸೆಗೆ ಒಳಗಾಗಿದ್ದಾರೆ.

ಮಂಡ್ಯ ನಗರದ ಗುರುಶ್ರೀ, ನಂದಾ ಚಿತ್ರಮಂದಿರಗಳಲ್ಲಿ  ಕೆಜಿಎಫ್ ಸಿನೆಮಾ ತೆರೆಗೆ ಬರಲು ರೆಡಿಯಾಗಿತ್ತು. ಆದರೆ ಕೋರ್ಟನ ತಡೆಯಿಂದಾಗಿ ಚಿತ್ರರಸಿಕರು ನಿರಾಸೆಗೊಳಗಾಗಿದ್ದಾರೆ.

ಮಂಡ್ಯ ನಗರದ 2ಚಿತ್ರಮಂದಿರ ಸೇರಿದಂತೆ ಜಿಲ್ಲೆಯಾದ್ಯಂತ 20 ಸ್ಕ್ರೀನ್‌ಗಳಲ್ಲಿ ಪ್ರದರ್ಶನಕ್ಕೆ ಕೆಜಿಎಫ್ ರೆಡಿಯಾಗಿತ್ತು.
ಚಿತ್ರಮಂದಿರ ಮುಂಭಾಗ ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ಮಾಪಕ‌ ವಿಜಯ್ ಕಿರಗಂದೂರು ಕಟೌಟ್
ನಿರ್ಮಾಣ ಮಾಡಲಾಗಿತ್ತು.

ಮಂಡ್ಯದವ್ರೇ ಆದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಅಭಿಮಾನಿಗಳು ಅದ್ಧೂರಿಯಿಂದಲೇ ಚಿತ್ರ ಸ್ವಾಗತಕ್ಕೆ ರೆಡಿಯಾಗಿದ್ದರು. ಆದರೆ ನ್ಯಾಯಾಲಯದ ತೀರ್ಪಿನಿಂದಾಗಿ ಟಿಕೆಟ್ ಪಡೆದ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ