Select Your Language

Notifications

webdunia
webdunia
webdunia
webdunia

ವಿವಾದದ ನಡುವೆಯೂ ಕೆಜಿಎಫ್ ಚಿತ್ರ ಅದ್ದೂರಿ ಬಿಡುಗಡೆ

ವಿವಾದದ ನಡುವೆಯೂ ಕೆಜಿಎಫ್ ಚಿತ್ರ ಅದ್ದೂರಿ ಬಿಡುಗಡೆ
ಆನೇಕಲ್ , ಶುಕ್ರವಾರ, 21 ಡಿಸೆಂಬರ್ 2018 (12:32 IST)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ಚಿತ್ರ ಕೆಜಿಎಫ್ ವಿವಾದದ ನಡುವೆಯು ಅದ್ದೂರಿಯಾಗಿ ಬಿಡುಗಡೆಯಾಗಿದೆ.

ಯಶ್ ಅಭಿಮಾನಿಗಳು ಕೆಜಿಎಫ್ ಚಲನಚಿತ್ರವನ್ನು ನೋಡಲು ಟಿಕೆಟ್ ಗಾಗಿ  ಮುಗಿಬಿದ್ದಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ನ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಮೊದಲನೇ ಶೋ ಪ್ರದರ್ಶನ ವಾಗಿದ್ದು, ಚಿತ್ರವನ್ನು ನೋಡಲು ಅಭಿಮಾನಿಗಳು ರಾತ್ರಿ ಎಂಟು ಗಂಟೆಯಿಂದ ಚಿತ್ರಮಂದಿರದ ಬಳಿ ಜಾಮಾಯಿಸಿ ಟಿಕೆಟ್ ಖರೀದಿಸಿದ್ದಾರೆ.

ಇನ್ನು ಆನೇಕಲ್ ನಲ್ಲಿ ಯಶ್ ಅಭಿಮಾನಿಗಳ ಹೆಚ್ಚಿನ  ಸಂಖ್ಯೆಯಲ್ಲಿ ಇದ್ದು ಶೋ ಪ್ರದರ್ಶನಕ್ಕೂ ಮುನ್ನ ಚಿತ್ರ ಮಂದಿರದ ಬಳಿ ಕಾಟೌಟ್ ಗಳನ್ನು ಹಾಕಿ ಯಶ್ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಕೆಜಿಎಫ್ ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಭಿಕ್ಷಾಟನೆ ಮಾಡಿದ್ಯಾಕೆ?