Select Your Language

Notifications

webdunia
webdunia
webdunia
webdunia

ಕೆಜಿಎಫ್ ಬಿಡುಗಡೆ ಬೆನ್ನಲ್ಲೇ ಅಸಮಾಧಾನದ ಹೊಗೆ ಶುರು!

ಕೆಜಿಎಫ್ ಬಿಡುಗಡೆ ಬೆನ್ನಲ್ಲೇ ಅಸಮಾಧಾನದ ಹೊಗೆ ಶುರು!
ಬೆಂಗಳೂರು , ಶುಕ್ರವಾರ, 21 ಡಿಸೆಂಬರ್ 2018 (08:54 IST)
ಬೆಂಗಳೂರು: ದೇಶ, ವಿದೇಶಗಳಲ್ಲಿ ಏಕಕಾಲಕ್ಕೆ ಇಂದು ಕನ್ನಡ ಚಿತ್ರವೊಂದು ದಾಖಲೆ ಮಾಡಿ ಬಿಡುಗಡೆಯಾದ ಬೆನ್ನಲ್ಲೇ ಅಸಮಾಧಾನವೂ ಶುರುವಾಗಿದೆ.


ಕೆಜಿಎಫ್ ಚಿತ್ರ ಕನ್ನಡ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಜನರ ಪ್ರತಿಕ್ರಿಯೆ ಕೂಡಾ ಅದ್ಭುತವಾಗಿದೆ. ಆದರೆ ಕೆಜಿಎಫ್ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ಇರುವುದು, ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ತೆರೆಯದೇ ಹೋಗಿದ್ದು, ಕೆಲವು ಥಿಯೇಟರ್ ಗಳಲ್ಲಿ ಒಂದೊಂದೇ ಶೋ ನಿಗದಿಯಾಗಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ತಮಿಳುನಾಡಿನಲ್ಲೂ ಕೆಜಿಎಫ್ ಬಗ್ಗೆ ಮೊದಲೇ ಕ್ರೇಜ್ ಇತ್ತು. ಆದರೆ ಇಲ್ಲಿನ ಚಿತ್ರಮಂದಿರಗಳಲ್ಲೂ ಕೇವಲ ಒಂದೊಂದೇ ಶೋ ಇಟ್ಟಿರುವುದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೆಜಿಎಫ್ ಟೀಂ ಸರಿಯಾಗಿ ಕೆಲಸ ಮಾಡಿಲ್ಲ ಎಂಬುದು ಪ್ರೇಕ್ಷಕರ ಅಸಮಾಧಾನ.

ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುತೇಕ ಚಿತ್ರಗಳು ಮೊದಲ ದಿನವೇ ಪ್ರದರ್ಶನವಾಗಿ ಸೂಪರ್ ಹಿಟ್ ಆದ ತಾವರಕೆರೆ ಬಾಲಾಜಿ ಚಿತ್ರಮಂದಿರದಲ್ಲಿ ಕೆಜಿಎಫ್ ಪ್ರದರ್ಶನವಿಲ್ಲ ಎಂದು ಅಭಿಮಾನಿಯೊಬ್ಬರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಿವಿಆರ್ ಮತ್ತು ಐನೋಕ್ಸ್ ನಂತಹ ಮಲ್ಪಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರಿ ಬುಕಿಂಗ್ ಇಲ್ಲದೇ ಹೋಗಿದ್ದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು, ಕರ್ನಾಟಕ ಹೊರತಾಗಿ ಬೇರೆ ಕಡೆ ಇರುವ ಪ್ರೇಕ್ಷಕರಿಗೆ ಕನ್ನಡದಲ್ಲೇ ಚಿತ್ರ ನೋಡಲು ಸಾಕಷ್ಟು ಶೋ ಆಯೋಜಿಸಿಲ್ಲ ಎಂದೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದವರಿದ್ದಾರೆ. ಈ ಸಮಸ್ಯೆಗಳನ್ನು ಚಿತ್ರತಂಡ ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಬಾಯ್ ಕೆಜಿಎಫ್ v/s ಶಾರುಖ್ ಖಾನ್ ಜೀರೋ: ಆನ್ ಲೈನ್ ನಲ್ಲಿ ಜಟಾಪಟಿ