Publish Date: Fri, 21 Dec 2018 (16:20 IST)
Updated Date: Fri, 21 Dec 2018 (16:23 IST)
ನಿವೃತ್ತ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಂ.ಕೃಷ್ಣಪ್ಪ ವಿಧಿವಶರಾದ ನಿವೃತ್ತ ಪಿಎಸ್ಐ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದಲ್ಲಿ ಘಟನೆ ನಡೆದಿದೆ.
ಎಂ. ಕೃಷ್ಣಪ್ಪನವರು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕೃಷ್ಣಪ್ಪ ಕೋಲಾರ ಮೂಲದವರಾಗಿದ್ದಾರೆ. ಹೃದಯಾಘಾತದಿಂದ ನಿವೃತ್ತ ಅಧಿಕಾರಿ ಸಾವನ್ನಪ್ಪಿದ್ದಾರೆ.