Select Your Language

Notifications

webdunia
webdunia
webdunia
webdunia

ಕಾಡುಪ್ರಾಣಿಗೆ ವ್ಯಕ್ತಿ ಬಲಿಯಾಗಿದ್ದು ಹೇಗೆ ಗೊತ್ತಾ?

ಕಾಡು ಪ್ರಾಣಿ
ಕಾಡುಪ್ರಾಣಿಯೊಂದು ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದ ಘಟನೆ ನಡೆದಿದೆ.

ಕಾಡುಪ್ರಾಣಿ ಅಡ್ಡ ಬಂದಿದ್ರಿಂದ‌ ಮುಗ್ಗರಿಸಿದ ಬೈಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಂಡ್ಯದ ಮುತ್ತತ್ತಿಯ ಭೀಮೇಶ್ವರಿಯಲ್ಲಿ ಫಿಶ್ಶಿಂಗ್ ಕ್ಯಾಂಪ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದ ಘಟನೆಯಲ್ಲಿ ಕನಕಪುರ ತಾಲೂಕು ಬೊವಳ್ಳಿ ಗ್ರಾಮದ ವರದೇಗೌಡ(62)ಮೃತಪಟ್ಟಿದ್ದಾರೆ.

ಮುತ್ತತ್ತಿಯ ದೇವರ ದರ್ಶನ ಮುಗಿಸಿ ವಾಪಾಸ್ಸಾಗುವಾಗ ಅವಘಡ ಸಂಭವಿಸಿದೆ. ಬೈಕ್ ಗೆ ಕಾಡು ಪ್ರಾಣಿ ಅಡ್ಡ ಬಂದು ಸಂಭವಿಸಿದ ದುರ್ಘಟನೆ ಇದಾಗಿದೆ. ಈ ಕುರಿತು ಹಲಗೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಹಸೀಲ್ದಾರ್ ರ ವಾಹನವನ್ನೇ ಎಗರಿಸಿ ಕೈಚಳಕ ತೋರಿದ ಕಳ್ಳರು!