Publish Date: Tue, 18 Dec 2018 (18:16 IST)
Updated Date: Tue, 18 Dec 2018 (18:19 IST)
ಕುದುರೆಗಳ ಗುಂಪೊಂದು ಮಹಿಳೆಯೊಬ್ಬಳ ಮೇಲೆ ದಾಳಿ ನಡೆಸಿರುವ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ಕುದುರೆಗಳು ದಾಳಿ ಮಾಡಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನ ಗಾಯತ್ರಿಪುರಂ ಬಡಾವಣೆಯಲ್ಲಿ ನಡೆದಿದೆ.
ಕುದುರೆಗಳ ದಾಳಿಯಿಂದ ಮೃತಪಟ್ಟಿರುವ ಮಹಿಳೆ ಪಾರ್ವತಮ್ಮ (55) ಎನ್ನಲಾಗಿದೆ. ಈಕೆ ತನ್ನ ಸಂಸಾರವನ್ನು ನಿಭಾಯಿಸಲು ತರಕಾರಿ, ಸೊಪ್ಪು ಮಾರಾಟ ವ್ಯಾಪಾರ ಮಾಡುತ್ತಿದ್ದರು. ಎಂದಿನಂತೆ ಇಂದು ಬೆಳಿಗ್ಗೆ ಸೊಪ್ಪು ಮಾರುವ ವೇಳೆಯಲ್ಲಿ ಏಳೆಂಟು ಕುದುರೆಗಳು ಪರಸ್ಪರ ಕಚ್ಚಾಡುತ್ತಿದ್ದವು. ಇವುಗಳ ಕಚ್ಚಾಟದಿಂದ ಗಾಬರಿಗೊಂಡ ಕೆಲವು ಕುದುರೆಗಳ ಪೈಕಿ ಒಂದು ಕುದುರೆ ಪಾರ್ವತಮ್ಮನವರಿಗೆ ಕಾಲಿನಿಂದ ಒದ್ದರೆ, ಮತ್ತೊಂದು ಕುದುರೆ ಅವರನ್ನು ಕಚ್ಚಿದೆ. ಈ ಆಘಾತದಿಂದ ಪಾರ್ವತಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.