Publish Date: Thu, 13 Dec 2018 (18:54 IST)
Updated Date: Thu, 13 Dec 2018 (19:01 IST)
ಶಶಿಕಲಾ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ಇ ಡಿ ಅಧಿಕಾರಿಗಳ ತಂಡವು ಶಶಿಕಲಾ ಅವರನ್ನು ವಿಚಾರಣೆಗೆ ಗುರಿಪಡಿಸಿತು.
ಚೆನೈ ನಿಂದ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ ತಂಡವು ಕಳೆದ ನವೆಂಬರ್ ನಲ್ಲಿ ಶಶಿಕಲಾ ಮನೆ ಮೇಲೆ ಐಟಿ ದಾಳಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತು.
ಆಗ 187 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಆಗಿತ್ತು. ದಾಳಿ ಸಂಬಂಧ ಐಟಿ ಅಧಿಕಾರಿಗಳಿಂದ ವಿಚಾರಣೆ ನಡೆಯಿತು. ಐಎಎಸ್ ಅಧಿಕಾರಿ ವಿರರಾಘವ ರಾವ್ ನೇತೃತ್ವದಲ್ಲಿ ತಂಡ ಆಗಮನವಾಗಿ, ಶಶಿಕಲಾಗೆ ಅಧಿಕಾರಿಗಳಿಂದ ವಿಚಾರಣೆ ನಡೆಯಿತು.