Publish Date: Wed, 12 Dec 2018 (09:14 IST)
Updated Date: Wed, 12 Dec 2018 (09:15 IST)
ಪರ್ತ್: ಸೋಲನ್ನು ಅಷ್ಟು ಸುಲಭವಾಗಿ ಸ್ವೀಕರಿಸುವ ಜಾಯಮಾನದವರು ಆಸ್ಟ್ರೇಲಿಯನ್ನರಲ್ಲ. ಇದೀಗ ಟೀಂ ಇಂಡಿಯಾ ವಿರುದ್ಧ ಸೋತ ಹತಾಶೆ ಆಸ್ಟ್ರೇಲಿಯಾ ಆಟಗಾರರನ್ನು ಬಹುವಾಗಿ ಕಾಡುತ್ತಿದೆ.
ಇದೇ ವಿಚಾರವಾಗಿ ಇದೀಗ ತಂಡದೊಳಗೆ ಬಿರುಕು ಮೂಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ತಂಡ ಇದೀಗ ಸೋಲಿಗೆ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ನಾಯಕ ಟಿಮ್ ಪೇಯ್ನ್ ಸೋಲಿಗೆ ಹಲವು ಕಾರಣಗಳನ್ನು ಹೇಳಿದ್ದು, ಅದರಲ್ಲಿ ಮುಖ್ಯವಾಗಿ ತಂಡದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಕಳಪೆ ಫಾರ್ಮ್ ಬಗ್ಗೆ ಕಿಡಿ ಕಾರಿದ್ದಾರೆ. ಬಹಿರಂಗವಾಗಿ ಹೀಗೆ ಸ್ಟಾರ್ಕ್ ವಿರುದ್ಧ ಹೇಳಿಕೆ ನೀಡಿರುವುದು ತಂಡದೊಳಗಿನ ಅಸಮಾಧಾನವನ್ನು ಹೊರಹಾಕಿದಂತಾಗಿದೆ.
ಈಗಾಗಲೇ ಸೋಲಿನ ಸುಳಿಗೆ ಸಿಲುಕಿರುವ ಆಸ್ಟ್ರೇಲಿಯಾ ತಂಡದಲ್ಲಿ ಈ ಹೇಳಿಕೆ ಮತ್ತಷ್ಟು ಬೆಂಕಿ ಹತ್ತಿಸುವ ಸಾಧ್ಯತೆಯಿದೆ. ಸೋಲಿಗೆ ತನ್ನನ್ನು ನಾಯಕ ಹೊಣೆ ಮಾಡಿರುವುದು ಸ್ಟಾರ್ಕ್ ಸಿಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ