Publish Date: Tue, 11 Dec 2018 (09:39 IST)
Updated Date: Tue, 11 Dec 2018 (09:50 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡರ್ ಕೆಎಲ್ ರಾಹುಲ್ ಹಿಡಿದ ಕ್ಯಾಚ್ ಇದೀಗ ವಿವಾದಕ್ಕೀಡಾಗಿದೆ.
ನಥನ್ ಲಿಯನ್ ಮತ್ತು ಹೇಝಲ್ ವುಡ್ ಜಿಗುಟು ಆಟ ಆಡುತ್ತಾ ಅಂತಿಮ ವಿಕೆಟ್ ಭಾರತದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಅಶ್ವಿನ್ ಎಸೆದ ಬಾಲ್ ನನ್ನು ಸ್ಲಿಪ್ ಕಡೆಗೆ ತಳ್ಳಿದ ಹೇಝಲ್ ವುಡ್ ಕೆಎಲ್ ರಾಹುಲ್ ಕೈಯಲ್ಲಿ ಕ್ಯಾಚ್ ಔಟ್ ಆದರು.
ಆದರೆ ಈ ಕ್ಯಾಚ್ ನ್ನು ರಾಹುಲ್ ಹಿಡಿಯುವಾಗ ನೆಲಕ್ಕೆ ಹಾಕಿದ್ದರು ಎಂದು ಆಸೀಸ್ ಮಾಧ್ಯಮವೊಂದು ಆರೋಪಿಸಿದೆ. ರಾಹುಲ್ ಕೈ ನೆಲಕ್ಕೆ ತಾಕಿತ್ತು, ಇದು ಕ್ಲೀನ್ ಕ್ಯಾಚ್ ಆಗಿರಲಿಲ್ಲ ಎಂದು ಆಸ್ಟ್ರೇಲಿಯಾದ ಫಾಕ್ಸ್ ಸ್ಪೋರ್ಟ್ಸ್ ಆರೋಪಿಸಿದೆ.
ಆದರೆ ಆಸೀಸ್ ಮಾಧ್ಯಮ ಈ ರೀತಿ ಹುಳುಕು ಪತ್ತೆ ಮಾಡಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆ ಮಾಧ್ಯಮವನ್ನು ಹಿಗ್ಗಾ ಮುಗ್ಗಾ ಟೀಕಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾ ಮಾದದರಿಯಲ್ಲಿ ಇದೀಗ ಆಸ್ಟ್ರೇಲಿಯಾ ಕೂಡಾ ಸೋಲಿನಲ್ಲಿ ಇಂತಹ ಸಿಲ್ಲಿ ಕಾರಣಗಳನ್ನು ಹುಡುಕುತ್ತಿದೆ ಎಂದು ಭಾರತೀಯ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ