Publish Date: Sun, 09 Dec 2018 (09:07 IST)
Updated Date: Sun, 09 Dec 2018 (09:09 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಆಸೀಸ್ ಗೆ 322 ರನ್ ಗಳ ಗುರಿ ನೀಡಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ರನ್ ಗಳಿಗೆ 307 ಆಲೌಟ್ ಆಯಿತು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ಕೊನೆಯ ಹಂತದಲ್ಲಿ ನಥನ್ ಲಿಯೊನ್ ಬೌಲಿಂಗ್ ಗೆ ತತ್ತರಿಸಿ ದಿಡೀರ್ ಕುಸಿತ ಕಂಡಿತು. ಹೀಗಾಗಿ ಬೃಹತ್ ಮೊತ್ತದ ಕನಸು ನನಸಾಗಲಿಲ್ಲ.
ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ 71 ಮತ್ತು ಅಜಿಂಕ್ಯಾ ರೆಹಾನೆ 70 ರನ್ ಗಳಿಸಿದರು. ಆಸೀಸ್ ಪರ ನಥನ್ ಲಿಯೋನ್ 6 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ಭಾರತ 15 ರನ್ ಗಳ ಮುನ್ನಡೆ ಪಡೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ