ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಗಲೇ ಎರಡೂ ತಂಡಗಳ ನಡುವೆ ಲೈಟಾಗಿ ಮಾತಿನ ಚಕಮಕಿ ಶುರುವಾಗಿದೆ.
ಸ್ಲೆಡ್ಜಿಂಗ್ ಇಲ್ಲ ಎನ್ನುತ್ತಲೇ ಉಭಯ ತಂಡಗಳು ಪರಸ್ಪರ ಕೆಣಕಲು ಶುರು ಮಾಡಿವೆ. ಇದೇ ರೀತಿ ಟೀಂ ಇಂಡಿಯಾದ ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮನ್ನು ಕೆಣಕಲು ಬಂದ ಆಸೀಸ್ ಬೌಲರ್ ಗೆ ಕೆಎಲ್ ರಾಹುಲ್ ಬೌಂಡರಿ ಮೂಲಕ ಪ್ರತ್ಯುತ್ತರ ನೀಡಿದ ಘಟನೆ ನಡೆದಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಮೊದಲ ಆರು ಓವರ್ ನಲ್ಲಿ ಓವರ್ ಗೆ ಒಂದು ರನ್ ನಂತೆ ತೀರಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ಆರಂಭಿಕರ ನಡೆಯಿಂದ ಬೇಸತ್ತ ಆಸೀಸ್ ಬೌಲರ್ ಪ್ಯಾಟ್ ಕ್ಯುಮಿನ್ಸ್ ಕೆಎಲ್ ರಾಹುಲ್ ರನ್ನು ಕೆಣಕಿದ್ದಾರೆ.
ಕ್ಯುಮಿನ್ಸ್ ಎಸೆತವನ್ನು ಸ್ಲಿಪ್ ಮೇಲೆ ಬಾರಿಸಲು ಹೋದ ರಾಹುಲ್ ವಿಫಲರಾದಾಗ ಕ್ಯುಮಿನ್ಸ್ ಸಂಜ್ಞೆ ಮೂಲಕ ಕಿಚಾಯಿಸಿದ್ದಾರೆ. ಆದರೆ ಕ್ಯುಮಿನ್ಸ್ ಗೆ ಮಾತಿನ ಮೂಲಕ ಪ್ರತ್ಯುತ್ತರ ನೀಡದ ರಾಹುಲ್ ಮರು ಎಸೆತವನ್ನು ಅದೇ ಜಾಗದಲ್ಲಿ ಫೀಲ್ಡರ್ ಗಳನ್ನು ವಂಚಿಸಿ ಬೌಂಡರಿ ಬಾರಿಸುವ ಮೂಲಕ ನಗು ನಗುತ್ತಲೇ ಎದುರಾಳಿಗೆ ಏಟು ಕೊಟ್ಟಿದ್ದಾರೆ. ಈ ಇನಿಂಗ್ಸ್ ನಲ್ಲಿ ರಾಹುಲ್ 44 ರನ್ ಸಿಡಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ