Publish Date: Sat, 08 Dec 2018 (08:59 IST)
Updated Date: Sat, 08 Dec 2018 (09:06 IST)
ಅಡಿಲೇಡ್: ಆಸ್ಟ್ರೇಲಿಯಾ ಟಿ 20 ಸರಣಿಯುದ್ದಕ್ಕೂ ಟೀಂ ಇಂಡಿಯಾ ಪಾಲಿಗೆ ದಿ ವಿಲನ್ ಆಗಿದ್ದ ವರುಣ ಇದೀಗ ಟೆಸ್ಟ್ ಸರಣಿಯಲ್ಲೂ ವಕ್ಕರಿಸಿಕೊಂಡಿದ್ದಾನೆ.
ತೃತೀಯ ದಿನ ಆಸ್ಟ್ರೇಲಿಯಾವನ್ನು ಮೊದಲ ಇನಿಂಗ್ಸ್ ನಲ್ಲಿ 235 ಆಲೌಟ್ ಮಾಡಿ ಅಲ್ಪ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಭಾರತಕ್ಕೆ ವರುಣ ಅಡ್ಡಿಯಾಗಿದ್ದಾನೆ. ಅಡಿಲೇಡ್ ಮೈದಾನದಲ್ಲಿ ಮಳೆ ಸುರಿಯುತ್ತಿರುವುದರಿಂದ ಪಂದ್ಯ ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ.
ನಿನ್ನೆ 191 ಕ್ಕೆ 7 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಆಸೀಸ್ ಇಂದು 44 ರನ್ ಸೇರಿಸಿ ಆಲೌಟ್ ಆಯಿತು. ಇಂದು ಭಾರತದ ಪರ ಮೊಹಮ್ಮದ್ ಶಮಿ 2 ವಿಕೆಟ್ ಕಿತ್ತರು. ಇದರೊಂದಿಗೆ ಟೀಂ ಇಂಡಿಯಾಗೆ 15 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಲಭಿಸಿದೆ. ಪಿಚ್ ಸ್ಥಿತಿ ನೋಡಿದರೆ ಇದು ಭಾರತಕ್ಕೆ ಉಪಯುಕ್ತ ಮುನ್ನಡೆಯಾಗಿತ್ತು. ಆದರೆ ಇದೀಗ ಭಾರೀ ಮಳೆಯಾಗುತ್ತಿದ್ದು, ಭಾರತಕ್ಕೆ ಶಾಪವಾಗಿ ಕಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.