Publish Date: Fri, 07 Dec 2018 (16:33 IST)
Updated Date: Fri, 07 Dec 2018 (16:35 IST)
ರಾಜ್ ಕೋಟ್: ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 217 ರನ್ ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಸೌರಾಷ್ಟ್ರ316 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಆರಂಭ ಉತ್ತಮವಾಗಿತ್ತು. ಇನ್ ಫಾರ್ಮ್ ಬ್ಯಾಟ್ಸ್ ಮನ್ ದೇಗಾ ನಿಶ್ಚಲ್ 58 ರನ್ ಗಳಿಸಿದರು. ನಂತರ ಬಂದ ಕರುಣ್ ನಾಯರ್ (63) ಜತೆಗೆ ಉತ್ತಮ ಜತೆಯಾಟವಾಡುತ್ತಿದ್ದರು. ಆದರೆ ಇವರಿಬ್ಬರ ಪತನದ ನಂತರ ಕುಸಿಯುತ್ತಾ ಸಾಗಿದ ಕರ್ನಾಟಕ ಅಂತಿಮವಾಗಿ 217 ರನ್ ಗಳಿಗೆ ಆಲೌಟ್ ಆಗಿ 99 ರನ್ ಗಳ ಹಿನ್ನಡೆ ಅನುಭವಿಸಿತು.
ಸೌರಾಷ್ಟ್ರ ಪರ ಧರ್ಮೇಂದ್ರ ಸಿನ್ಹ ಜಡೇಜಾ 7 ವಿಕೆಟ್ ಕಬಳಿಸಿ ಕರ್ನಾಟಕ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಪಂದ್ಯದ ಎರಡನೇ ದಿನ ಇದಾಗಿದ್ದು, ಕರ್ನಾಟಕಕ್ಕೆ ಸೋಲಿನ ಭೀತಿ ಎದುರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ