Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಟಾಂಗ್ ಕೊಟ್ಟರೇ ಹರ್ಭಜನ್ ಸಿಂಗ್?!

ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಟಾಂಗ್ ಕೊಟ್ಟರೇ ಹರ್ಭಜನ್ ಸಿಂಗ್?!
ಮುಂಬೈ , ಶುಕ್ರವಾರ, 7 ಡಿಸೆಂಬರ್ 2018 (08:48 IST)
ಮುಂಬೈ: ಅತ್ತ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದರೆ ಇತ್ತ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ ಒಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.


ಟೀಂ ಇಂಡಿಯಾ ಮತ್ತು ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಕೊಹ್ಲಿ ಎಂದರೆ ಎದುರಾಳಿಗಳಿಗೆ ನಡುಕ ಎಂದೇ ಬಿಂಬಿಸಲಾಗಿತ್ತು. ಆದರೆ ಕೊಹ್ಲಿ ಮೂರೇ ರನ್ ಗೆ ಗಂಟು ಮೂಟೆ ಕಟ್ಟಿದರೆ, ಇತರ ಬ್ಯಾಟ್ಸ್ ಮನ್ ಗಳೂ ಜುಜುಬಿ ಮೊತ್ತಕ್ಕೆ ವಿಕೆಟ್ ಕೈ ಚೆಲ್ಲಿ ನಿರಾಸೆ ಮೂಡಿಸಿದರು.

ಇದರ ಬೆನ್ನಲ್ಲೇ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದು, ‘ನಿರೀಕ್ಷೆಗಳು ಮತ್ತು ವಿಶ್ವಾಸವಿಡುವುದು ಎರಡೂ ತಪ್ಪಲ್ಲ. ಆದರೆ ನಾವು ಯಾರಿಂದ ನಿರೀಕ್ಷೆ ಮಾಡಬೇಕು ಮತ್ತು ಯಾರನ್ನು ನಂಬಬೇಕು ಎನ್ನುವುದು ಮುಖ್ಯ. ಗುಡ್ ಡೇ ಫ‍್ರೆಂಡ್ಸ್’ ಎಂದು ಬರೆದಿದ್ದಾರೆ. ಭಜಿ ಈ ಮೂಲಕ ಕೊಹ್ಲಿ ಆಂಡ್ ಬಾಯ್ಸ್ ಗೆ ಟಾಂಗ್ ಕೊಟ್ಟರೇ ಎಂದು ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗಳಾಗುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಚೇತೇಶ್ವರ ಪೂಜಾರ ಅವರ ದ್ರಾವಿಡ್ ಮಾದರಿಯ ಶತಕದೊಂದಿಗೆ ದಿನದಾಟ ಮುಗಿಸಿದ ಟೀಂ ಇಂಡಿಯಾ