ಕೆಎಲ್ ರಾಹುಲ್ ಮೇಲೆ ಸಿಟ್ಟಿಗೆದ್ದ ಅಭಿಮಾನಿಗಳು

ಗುರುವಾರ, 6 ಡಿಸೆಂಬರ್ 2018 (10:41 IST)
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಪ್ಲಾಪ್ ಶೋ ನೀಡಿದ ಬಳಿಕ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿದೇಶೀ ನೆಲದಲ್ಲಿ ಕನಿಷ್ಠ ಎರಡು ಓವರ್ ಬ್ಯಾಟಿಂಗ್ ಮಾಡಲಾಗದಿದ್ದ ಮೇಲೆ ಈ ವ್ಯಕ್ತಿ ತಂಡದಲ್ಲಿ ಇನ್ನೂ ಯಾಕೆ ಉಳಿದುಕೊಂಡಿದ್ದಾರೆ ಎಂದು ಅಭಿಮಾನಿಗಳು ಟ್ವಿಟರ್ ನಲ್ಲಿ ಕಿಡಿ ಕಾರಿದ್ದಾರೆ.ಕೇವಲ ಫೋಟೋ ಶೂಟ್, ಮೈಮೇಲೆ ಟ್ಯಾಟೂ ಹಾಕಿಸಿಕೊಂಡು ಫ್ಯಾಶನ್ ಮಾಡಲು ಮಾತ್ರ ರಾಹುಲ್ ಲಾಯಕ್ಕು. ಇವರಿಗಿಂತ ಯುವ ಹನುಮ ವಿಹಾರಿಗೆ ಸ್ಥಾನ ಕೊಡಲಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ 8 ಎಸೆತ ಎದುರಿಸಿದ ರಾಹುಲ್ ಕೇವಲ 2 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. ಇದಕ್ಕೆ ಮೊದಲು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲೂ ವಿಫಲರಾಗಿದ್ದರು. ಇದೇ ಕಾರಣಕ್ಕೆ ಇದೀಗ ರಾಹುಲ್ ರನ್ನು ತಂಡದಿಂದ ಕೈಬಿಡಲು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ಆಸ್ಟ್ರೇಲಿಯಾ ಟೆಸ್ಟ್: ಪೂಜಾರ ಮಾತು ಕೇಳಿ ವಿಕೆಟ್ ಕಳೆದುಕೊಂಡರೇ ರಿಷಬ್ ಪಂತ್?!