ಆಸ್ಟ್ರೇಲಿಯಾದಲ್ಲಿ ಹೊಸ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಎರಡೇ ಹೆಜ್ಜೆ

ಬುಧವಾರ, 5 ಡಿಸೆಂಬರ್ 2018 (09:15 IST)
ಅಡಿಲೇಡ್: ನಾಳೆಯಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಬರೆಯುವ ಅವಕಾಶ ಎದುರಾಗಿದೆ.

ವಿರಾಟ್ ಕೊಹ್ಲಿ ನಾಳೆಯ ಟೆಸ್ಟ್ ಪಂದ್ಯದಲ್ಲಿ ಎಂಟು ರನ್ ಗಳಿಸಿದಾಗ ಆಸ್ಟ್ರೇಲಿಯಾದಲ್ಲಿ 1000 ಟೆಸ್ಟ್ ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಇದುವರೆಗೆ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಎಂಟು ಟೆಸ್ಟ್ ಪಂದ್ಯವಾಡಿದ್ದು, ಅದರಿಂದ 992 ರನ್ ಗಳಿಸಿದ್ದಾರೆ.

ಈಗಾಗಲೇ ಭಾರತದ ಪರ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಈ ದಾಖಲೆ ಮಾಡಿದ್ದಾರೆ. ಸಚಿನ್ 1809 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಶುರು: ರೋಹಿತ್ ಶರ್ಮಾ ಆಡುವುದು ಪಕ್ಕಾ?