Select Your Language

Notifications

webdunia
webdunia
webdunia
webdunia

ರಜಾ ದಿನವೂ ರವಿಶಾಸ್ತ್ರಿ ಕಣ್ಗಾವಲಿನಲ್ಲಿ ಸ್ಪೆಷಲ್ ತರಬೇತಿ ಪಡೆದ ರೋಹಿತ್ ಶರ್ಮಾ, ಆರ್ ಅಶ್ವಿನ್

ರಜಾ ದಿನವೂ ರವಿಶಾಸ್ತ್ರಿ ಕಣ್ಗಾವಲಿನಲ್ಲಿ ಸ್ಪೆಷಲ್ ತರಬೇತಿ ಪಡೆದ ರೋಹಿತ್ ಶರ್ಮಾ, ಆರ್ ಅಶ್ವಿನ್
ಸಿಡ್ನಿ , ಮಂಗಳವಾರ, 4 ಡಿಸೆಂಬರ್ 2018 (09:18 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಆಟಗಾರರ ಪೈಕಿ ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದಂತಿದೆ.


ಇಬ್ಬರ ಪಾಲಿಗೂ ಇದು ಮಹತ್ವದ ಸರಣಿ. ರೋಹಿತ್ ಶರ್ಮಾಗೆ ಇದು ಕಮ್ ಬ್ಯಾಕ್ ಮಾಡಲು ಸಿಕ್ಕಿರುವ ಅವಕಾಶ. ಹಾಗೆಯೇ ಅಶ್ವಿನ್ ಗೆ ಫಾರ್ಮ್ ಗೆ ಮರಳಲು ಸಿಕ್ಕಿರುವ ಸುವರ್ಣಾವಕಾಶ. ಹೀಗಾಗಿ ಇಬ್ಬರೂ ಅದನ್ನು ಸಾಬೀತುಪಡಿಸಲು ಕಠಿಣ ಪರಿಶ್ರಮಪಡುತ್ತಿದ್ದಾರೆ.

ನಿನ್ನೆ ಭಾರತೀಯ ಆಟಗಾರರಿಗೆ ಕಡ್ಡಾಯ ನೆಟ್ ಪ್ರಾಕ್ಟೀಸ್ ಇರದೇ ಇದ್ದರೂ ಈ ಇಬ್ಬರೂ ಆಟಗಾರರು ಕೋಚ್ ರವಿಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿ ನೆರವಿನಿಂದ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿದ್ದಾರೆ. ಆ ಮೂಲಕ ಆಸೀಸ್ ಸರಣಿಯಲ್ಲಿ ತಮ್ಮ ಖದರ್ ತೋರಿಸಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಪ್ರತೀ ರನ್ ಗೂ ಪರದಾಡುವಂತೆ ಮಾಡಿ ಎಂದವರು ಯಾರು ಗೊತ್ತೇ?