Publish Date: Sun, 02 Dec 2018 (09:40 IST)
Updated Date: Sun, 02 Dec 2018 (09:44 IST)
ಸಿಡ್ನಿ: ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಪರೂಪಕ್ಕೆ ಬೌಲಿಂಗ್ ಮಾಡಿ ಒಂದು ವಿಕೆಟ್ ಕೂಡಾ ಕಿತ್ತು ಗಮನ ಸೆಳೆದಿದ್ದರು.
ಸಾಮಾನ್ಯವಾಗಿ ಬೌಲಿಂಗ್ ಮಾಡಿದ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದೇಕೆ ಎಂಬುದಕ್ಕೆ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಕಾರಣ ವಿವರಿಸಿದ್ದಾರೆ.
ತಮ್ಮ ಬೌಲರ್ ಗಳಿಗೆ ಯಾವ ಏರಿಯಾದಲ್ಲಿ ಹೇಗೆ ಬಾಲ್ ಎಸೆಯಬೇಕು ಎಂದು ಸ್ವತಃ ತೋರಿಸಿಕೊಡಲು ಕೊಹ್ಲಿ ಬೌಲಿಂಗ್ ಮಾಡಿದರು ಎಂದು ಕಿಚಾಯಿಸಿದ ಅಶ್ವಿನ್ ಬಳಿಕ ಎಲ್ಲಾ ಬೌಲರ್ ಗಳೂ ಸುಸ್ತಾಗಿದ್ದರು. ಹೊಸ ಚೆಂಡು ಪಡೆಯುವ ಮೊದಲು ಬೌಲರ್ ಗಳಿಗೆ ಕೊಂಚ ವಿರಾಮ ನೀಡಲು ಕೊಹ್ಲಿ ಬೌಲಿಂಗ್ ಮಾಡಿದರು ಎಂದು ಸರಿಯಾದ ಕಾರಣ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ