Publish Date: Fri, 30 Nov 2018 (09:56 IST)
Updated Date: Fri, 30 Nov 2018 (09:57 IST)
ಸಿಡ್ನಿ: ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಸರಣಿಗೂ ಮೊದಲೇ ಪೃಥ್ವಿ ಶಾ ರೂಪದಲ್ಲಿ ಶಾಕ್ ಸಿಕ್ಕಿದೆ. ಈ ಸರಣಿಯಲ್ಲಿ ಪೃಥ್ವಿ ಶಾ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡು ಆತಂಕ ಮೂಡಿಸಿದ್ದಾರೆ.
ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಪಡುವಾಗ ಕಾಲು ಉಳುಕಿಸಿಕೊಂಡ ಪೃಥ್ವಿ ಶಾರನ್ನು ಸಹಾಯಕ ಸಿಬ್ಬಂದಿಗಳು ಹೊತ್ತು ಪೆವಿಯಲಿನ್ ಗೆ ಕರೆದೊಯ್ದಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರೀ ಭರವಸೆ ಮೂಡಿಸಿದ್ದ ಪೃಥ್ವಿ ಶಾ ಮತ್ತೊಬ್ಬ ಸಚಿನ್ ತೆಂಡುಲ್ಕರ್ ಆಗಲಿದ್ದಾರೆ ಎಂದೇ ಎಲ್ಲರೂ ಹೊಗಳಿಕೆ ನೀಡಿದ್ದರು. ಯುವ ಬ್ಯಾಟ್ಸ್ ಮನ್ ಟೀಂ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿತ್ತು. ಆದರೆ ಅವರ ಗಾಯದ ತೀವ್ರತೆ ಎಷ್ಟು ಎಂದು ತಿಳಿದುಬಂದಿಲ್ಲ. ಪೃಥ್ವಿ ಗುಣಮುಖರಾಗಲು ವೈದ್ಯಕೀಯ ತಂಡ ಶ್ರಮಿಸುತ್ತಿದ್ದು, ಡಿಸೆಂಬರ್ 6 ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಗೂ ಮುನ್ನ ಫಿಟ್ ಆಗಲು ಪ್ರಯತ್ನಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ