Publish Date: Thu, 29 Nov 2018 (09:02 IST)
Updated Date: Thu, 29 Nov 2018 (09:03 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಅಭ್ಯಾಸ ಪಂದ್ಯವಾಡಿ ತಯಾರಾಗಬೇಕಿದ್ದ ಟೀಂ ಇಂಡಿಯಾ ಆಟಗಾರರ ಕನಸಿಗೆ ಮಳೆ ಬ್ರೇಕ್ ಹಾಕಿದೆ.
ಇದೇ ಕಾರಣಕ್ಕೆ ಟೀಂ ಇಂಡಿಯಾ ಆಟಗಾರರು ಕಠಿಣ ತರಬೇತಿಗೆ ಬ್ರೇಕ್ ಹಾಕದೇ ಸಿಡ್ನಿಯ ಮೈದಾನದಲ್ಲಿರುವ ಜಿಮ್ ಗೆ ತೆರಳಿ ತಾಲೀಮು ನಡೆಸಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆಟಗಾರರೆಲ್ಲರೂ ಮೈದಾನದಲ್ಲಿ ಸಿಗದ ಅಭ್ಯಾಸವನ್ನು ಜಿಮ್ ನಲ್ಲಿ ದೇಹ ದಂಡಿಸುವ ಮೂಲಕ ಪೂರ್ತಿಗೊಳಿಸಿದ್ದಾರೆ. ಆ ಮೂಲಕ ಮಹತ್ವದ ಟೂರ್ನಿಗೆ ಮೊದಲು ಫಿಟ್ ಆಗಿರಲು ಕಸರತ್ತು ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.