Select Your Language

Notifications

webdunia
webdunia
webdunia
webdunia

ಬಿಸಿಸಿಐಗೆ ಮಿಥಾಲಿ ರಾಜ್ ಬರೆದ ಸೀಕ್ರೆಟ್ ಈಮೇಲ್ ಸೋರಿಕೆ: ಇದೀಗ ಮತ್ತೊಂದು ವಿವಾದ

ಬಿಸಿಸಿಐಗೆ ಮಿಥಾಲಿ ರಾಜ್ ಬರೆದ ಸೀಕ್ರೆಟ್ ಈಮೇಲ್ ಸೋರಿಕೆ: ಇದೀಗ ಮತ್ತೊಂದು ವಿವಾದ
ಮುಂಬೈ , ಬುಧವಾರ, 28 ನವೆಂಬರ್ 2018 (09:50 IST)
ಮುಂಬೈ: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ರನ್ನು ಕಡೆಗಣಿಸಿದ ನಂತರ ಎದ್ದಿರುವ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಅದಕ್ಕಿಂತ ಮೊದಲೇ ಮತ್ತೊಂದು ವಿವಾದ ಸೇರಿಕೊಂಡಿದೆ.


ಬೇಕೆಂದೇ ಪ್ರಮುಖ ಪಂದ್ಯಕ್ಕೆ ಫಾರ್ಮ್ ನಲ್ಲಿದ್ದ, ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ರನ್ನು ಕೈ ಬಿಡಲಾಯಿತು ಎಂಬ ಆರೋಪಗಳ ಬೆನ್ನಲ್ಲೇ ಮಿಥಾಲಿ ಮತ್ತು ನಾಯಕಿ ಹರ್ಮನ್ ಪ್ರೀತ್ ರನ್ನು ಕರೆಸಿಕೊಂಡು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿಚಾರಣೆ ನಡೆಸಿದ್ದರು.

ಅದರ ಬೆನ್ನಲ್ಲೇ ಮಿಥಾಲಿ ರಾಜ್ ಬಿಸಿಸಿಐಗೆ ಈಮೇಲ್ ಒಂದನ್ನು ರವಾನಿಸಿ ತನ್ನನ್ನು ಕೋಚ್ ರಮೇಶ್ ಪವಾರ್, ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಬಿಸಿಸಿಐ ಅಧಿಕಾರಿ ಡಿಯಾನ ಎಡುಲ್ಜಿ ಕಡೆಗಣಿಸಲು ವ್ಯವಸ್ಥಿತವಾಗಿ ತಂತ್ರ ಹೆಣೆದಿದ್ದರು ಎಂದು ಆರೋಪಿಸಿದ್ದರು. ಈ ಈಮೇಲ್ ಇದೀಗ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಇದರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಿಟ್ಟಿಗೆದ್ದಿದ್ದಾರೆ.

ಖಾಸಗಿಯಾಗಿ ಬಿಸಿಸಿಐ ಅಧಿಕಾರಿಗಳಿಗೆ ಮಿಥಾಲಿ ರಾಜ್ ಬರೆದ ಪತ್ರ ಸೋರಿಕೆಯಾಗಿದ್ದು ಹೇಗೆ ಎಂಬ ವಿಚಾರಣೆ ನಡೆಸುವಂತೆ ಅವರು ಸಿಇಒ ರಾಹುಲ್ ಜೋಹ್ರಿ ಮತ್ತು ಜನರಲ್ ಮ್ಯಾನೇಜರ್ ಸಬಾ ಕರೀಂಗೆ ಆದೇಶಿಸಿದ್ದಾರೆ. ಹೀಗಾಗಿ ಮಿಥಾಲಿ ವಿವಾದಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಟಾಸ್ ಸೋತ ಕರ್ನಾಟಕಕ್ಕೆ ಮೊದಲ ಗೆಲುವಿನ ನಿರೀಕ್ಷೆ