Select Your Language

Notifications

webdunia
webdunia
webdunia
webdunia

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಭಾರತ ವನಿತೆಯರು

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಭಾರತ ವನಿತೆಯರು
ಗಯಾನ , ಶುಕ್ರವಾರ, 23 ನವೆಂಬರ್ 2018 (08:49 IST)
ಗಯಾನ: ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮಹಿಳೆಯರು 8 ವಿಕೆಟ್ ಗಳಿಂದ ಸೋಲು ಅನುಭವಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯರು 19.3 ಓವರ್ ಗಳಲ್ಲಿ 112 ರನ್ ಗಳಿಗೆ ಆಲೌಟ್ ಆಗಿತ್ತು. ಅನುಭವಿ ಮಿಥಾಲಿ ರಾಜ್ ರನ್ನು ಆಡುವ ಬಳಗದಿಂದ ಕೈ ಬಿಟ್ಟಿದ್ದು ಭಾರತಕ್ಕೆ ದುಬಾರಿಯಾಯಿತು. ಸ್ಮೃತಿ ಮಂಧನ 34 ಮತ್ತು ಜೆಮಿಮಾ ರೋಡ್ರಿಗಸ್ 26 ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್ ಗಳಿಸಿದ್ದು ಉಳಿದವರು  ಯಾರೂ ಎರಡಂಕಿಯನ್ನೂ ತಲುಪಲಿಲ್ಲ.

ಭಾರತ ನೀಡಿದ ಗುರಿಯನ್ನು ಬೆಂಬತ್ತಿದ ಇಂಗ್ಲೆಂಡ್ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡರೂ ನಂತರ ವಿಕೆಟ್ ಕೀಪರ್ ಆಮಿ ಎಲೆನ್ ಜೋನ್ಸ್ 53 ರನ್ ಮತ್ತು ನಟಾಲಿ ಸಿವರ್ 52 ರನ್ ಅಜೇಯರಾಗಿ ಇಂಗ್ಲೆಂಡ್ ಗೆ ಸುಲಭ ಗೆಲುವು ನೀಡಿದರು. ಅಂತಿಮವಾಗಿ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 17.1 ಓವರ್ ಗೇ ಗುರಿ ಮುಟ್ಟಿತು. ಇದೀಗ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಮುಂಬೈ ವಿರುದ್ಧ ಕರ್ನಾಟಕಕ್ಕೆ ಬೃಹತ್ ಮುನ್ನಡೆ